ಉಳ್ಳಾಲ: ಮಳ್‌ಹರ್ ಸಿಲ್ವರ್ ಜ್ಯುಬಿಲಿ ದಕ್ಷಿಣ ಕನ್ನಡ ಸಂದೇಶ ಯಾತ್ರೆಗೆ ಚಾಲನೆ
ಮಂಗಳೂರು, ಜೂ.19: ಮಂಜೇಶ್ವರವನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ-ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಮಳ್‌ಹರ್ ನೂರಿಲ್ ಇಸ್ಲಾಮಿ ತಅಲೀಮಿಯ ಸಿಲ್ವರ್ ಜ್ಯುಬಿಲಿ ಹಾಗೂ ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ಅವರ 10ನೇ ಉರೂಸ್ ಮುಬಾರಕ್ ಅಂಗವಾಗಿ ಮಳ್‌ಹರ್ ಇನ್‌ಸ್ಟಿಟ್ಯೂಟ್ ಆಫ್ ಇಸ್ಲಾಮಿಕ್ ದಅವಾ ಇದರ ಹಳೆ ವಿದ್ಯಾರ್ಥಿಗಳ ಸಂಘಟನೆ ಖದಮುಲ್ ಮಳ್‌ಹರ್ ಓಲ್ಡೀಸ್ ಫೋರಂ ಆಯೋಜಿಸುತ್ತಿರುವ ದ.ಕ. ನಡೆಯುವ ಸಂದೇಶ ಯಾತ್ರೆ ಉಳ್ಳಾಲ ದರ್ಗಾದಲ್ಲಿ ಪ್ರಾರಂಭಗೊಂಡಿತು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಯಾತ್ರಾ ಧ್ವಜವನ್ನು ಸಯ್ಯಿದ್ ಮುಸ್ತಫಾ ಸಿದ್ದೀಖಿ ಹಾಗೂ ಹಸನ್ ಸಅದಿ ಅಲ್ ಅಫ್ಲಲಿಗೆ ಹಸ್ತಾಂತರಿಸಿದರು.
ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ, ಇಸ್ಹಾಕ್ ಹಾಜಿ, ಅಬ್ದುಲ್ ಬಾರಿ ಮಳ್‌ಹರಿ, ಹಂಝ ಮಳ್‌ಹರಿ, ತ್ವಯ್ಯಿಬ್ ಮಳ್‌ಹರಿ, ಸಿನಾನ್ ಮಳ್‌ಹರಿ, ಅನ್ಸಾರ್ ಮಳ್‌ಹರಿ, ಹುದೈಫ್ ಮಳ್‌ಹರಿ, ಅಝೀಮ್ ಮಳ್‌ಹರಿ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.