ಬ್ಯಾಂಕ್ ಆಫ್ ಬರೋಡಾದಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ
ಮಂಗಳೂರು, ಜೂ.22: ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾದ ದೇಶದ ಎಲ್ಲಡೆ ಇರುವ ಕಚೇರಿಗಳಲ್ಲಿ ಶನಿವಾರ ಅಂತರ್‌ರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಸಲಾಯಿತು.
ಬ್ಯಾಂಕ್‌ನ ನೌಕರರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಂತರ್‌ರಾಷ್ಟ್ರೀಯ ಯೋಗ ದಿನದಂದು, ಬ್ಯಾಂಕ್ ನಾನಾ ಸ್ಥಳಗಳಲ್ಲಿ ಉದ್ಯೋಗಿಗಳಿಗಾಗಿ ಯೋಗ ಶಿಬಿರಗಳನ್ನು ಆಯೋಜಿಸಿತು. ಮಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಮಹಾಪ್ರಬಂಧಕ ಮತ್ತು ವಲಯದ ಮುಖ್ಯಸ್ಥ ರಾಜೇಶ್ ಖನ್ನಾ ನೇತೃತ್ವ ವಹಿಸಿದ್ದರು.
ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗ ಶಿಬಿರವನ್ನು ನಡೆಸಲಾಯಿತು
2024 ನವೆಂಬರ್‌ನಲ್ಲಿ ಬ್ಯಾಂಕ್ ದೈನಂದಿನ ಲೈವ್ ಆನ್‌ಲೈನ್ ಯೋಗ ಮತ್ತು ಧ್ಯಾನ ಅಧಿವೇಶನ ಗಳನ್ನು ಆರಂಭಿಸಿತ್ತು, ಇದರಿಂದ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಪ್ರತಿದಿನ 30 ನಿಮಿಷಗಳನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮೀಸಲಿಡುವಂತೆ ಪ್ರೋತ್ಸಾಹಿಸಲಾಗಿತ್ತು.ಇದೇ ವೇಳೆ ನಿಯಮಿತವಾಗಿ ಆನ್‌ಲೈನ್ ಯೋಗ ಶಿಬಿರದಲ್ಲಿ ಪಾಲ್ಗೊಂಡಿರುವ ಉದ್ಯೋಗಿಗಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಲಾಲ್ ಸಿಂಗ್ ಮಾತನಾಡಿ ಯೋಗವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಳಿತಿಗೆ ಸಹಕಾರಿಯಾಗುತ್ತದೆ ಎಂದರು.