ಮಂಗಳೂರು: ಮೊಹಮ್ಮದ್ ಸಲಾಹುದ್ದೀನ್ ರಿಂದ ಶೇರು ಮಾರುಕಟ್ಟೆ ಬಗ್ಗೆ ಕಾರ್ಯಾಗಾರ
Update: 2025-06-22 22:26 IST
ಮಂಗಳೂರು: ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ತರಬೇತುದಾರರಾದ ಮೊಹಮ್ಮದ್ ಸಲಾಹುದ್ದೀನ್ ಅವರು ಷೇರು ಮಾರುಕಟ್ಟೆ ಬಗ್ಗೆ ಅಧ್ಯಯನ ಶಿಬಿರವನ್ನು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ನಲ್ಲಿ ರವಿವಾರ ನಡೆಸಿದರು.
ಸಲಾಹುದ್ದೀನ್ ಅವರು ಕಳೆದ 12 ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ್ದು, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯ ಬಗ್ಗೆ ಮಾಹಿತಿ ಹೊಂದಿರುವ ಹೂಡಿಕೆದಾರನಾಗಲು ಮತ್ತು ಜನರನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಲು ಕಾರ್ಯಾಗಾರವನ್ನು ನಡೆಸಿದರು.
ಈ ಸಂದರ್ಭ ಚಿನ್ನದ ಮಾರುಕಟ್ಟೆಯ ತಾಂತ್ರಿಕ ವಿಶ್ಲೇಷಣೆ ಬಗ್ಗೆ ಮಾಹಿತಿ ನೀಡಿದರು.