×
Ad

ಮೀಫ್ ಶಿಕ್ಷಣ ಸಂಸ್ಥೆಗಳ ದ.ಕ, ಉಡುಪಿ ಪ್ರತಿನಿಧಿಗಳ ಸಮಾವೇಶ

Update: 2025-06-28 22:10 IST

ಮಂಗಳೂರು: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ದ.ಕ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು ಮತ್ತು ಮುಖ್ಯೋಪಾಧ್ಯಾಯರ ಸಮಾವೇಶವು ಶನಿವಾರ ಮಂಗಳೂರಿನ ಹ್ಯಾಟ್ ಹಿಲ್‌ನ ಬ್ಯಾರಿಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಿತು.

ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಸಮಾವೇಶದ ಅಧ್ಯಕ್ಷತೆ ವಹಿಸಿ ಮೀಫ್ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ವಿವರವನ್ನು ಸಭೆಗೆ ಮಂಡಿಸಿದರು.

ಗೌರವಾಧ್ಯಕ್ಷ ಉಮರ್ ಟೀಕೆ ಪ್ರಧಾನ ಭಾಷಣ ಮಾಡಿದರು. ಮೀಫ್ ಮುಂದಿನ ವರ್ಷಗಳಲ್ಲಿ ಗಂಡು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುವುದು, ಮಾದಕ ವ್ಯಸನ ಮುಕ್ತ ಗೊಳಿಸುವುದು,ಸಮಾಜದಲ್ಲಿ ಸಾಮರಸ್ಯ ಉಂಟು ಮಾಡಲು ಮೀಫ್ ವಿದ್ಯಾ ಸಂಸ್ಥೆಗಳು ತಳಮಟ್ಟದಿಂದಲೇ ಶ್ರಮಿಸುವ ಅವಶ್ಯಕತೆ ಯನ್ನು ಹೇಳಿದರು.

ಸಭೆಯಲ್ಲಿ 4 ನಿರ್ಣಯಗಳನ್ನು ಅಂಗೀಕರಿಸಲಾಯಿತು.

*ಹಾಲಿ ವರ್ಷದ ಹಮ್ಮಿಕೊಂಡ ವಾರ್ಷಿಕ ಕ್ರಿಯಾ ಯೋಜನೆಗೆ ಅಂಗೀಕಾರ ನೀಡಲಾಯಿತು , ಮೊದಲ ಹಂತದಲ್ಲಿ ಮೀಫ್‌ನ 15 ವಿದ್ಯಾ ಸಂಸ್ಥೆಗಳ ಮೌಲ್ಯ ಮಾಪನವನ್ನು ನಡೆಸುವುದು, ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ 40 ವಿದ್ಯಾ ಸಂಸ್ಥೆಗಳಲ್ಲಿ 8, 9, 11ನೇ ತರಗತಿಗಳಲ್ಲಿ ಐಎಎಸ್, ಐಪಿಎಸ್ ಫೌಂಡೇಶನ್ ಕೋರ್ಸ್ ಸಂಬಂಧಿಸಿ ತಯಾರಿಸಲಾದ ಪಠ್ಯಕ್ರಮವನ್ನು ಬೋಧಿಸಲು ರಚಿಸಲಾದ ಪಠ್ಯ ಪುಸ್ತಕವನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸುವುದು ಮತ್ತು ಆಯಾ ವಿದ್ಯಾ ಸಂಸ್ಥೆಗಲ್ಲಿ ಅಳವಡಿ ಸುವ ಯೋಜನೆಗೆ ಮಂಜೂರಾತಿ ನೀಡಲಾಯಿತು. ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಅಳವಡಿಸಲು ತೀರ್ಮಾನಿಸಲಾಯಿತು.

ಸಮಾವೇಶದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ ಜಿಲ್ಲಾ ಕಮಿಷನರ್ ಮುಹಮ್ಮದ್ ತುಂಬೆ, ಉಡುಪಿ ಜಿಲ್ಲೆಯ ಪ್ರತಿನಿಧಿ ಪ್ರತೀಮ್ ಕುಮಾರ್, ಮೀಫ್ ಸಲಹೆಗಾರರಾದ ಫಾರೂಕ್ ಏರ್‌ಲೈನ್ಸ್ , ಉಪಾಧ್ಯಕ್ಷ ಶಾಬಿಹ್ ಅಹ್ಮದ್ ಕಾಝಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ ಕಾರ್ಯದರ್ಶಿಗಳಾದ ಬಿ. ಎ ಇಕ್ಬಾಲ್, ಶೈಖ್ ರಹ್ಮತುಲ್ಲಾ ಸದಸ್ಯರುಗಳಾದ ರಝಾಕ್ ಹಜಾಜ್, ಬಿ. ಎ ನಝೀರ್, ಪಿ. ಎ ಇಲ್ಯಾಸ್, ಶರೀಫ್ ಬಜ್ಪೆ, ಆದಿಲ್ ಸೂಫಿ , ಅಬ್ದುಲ್ ರಹ್ಮಾನ್, ಅಝೀಝ್, ಸಿರಾಜ್ ಮನೆಗಾರ್, ಎಂ.ಎ ಹನೀಫ್, ಬಶೀರ್ ಕುಂಬ್ರ , ಬಿಪಿಎಸ್ ಹ್ಯಾಟ್ ಹಿಲ್‌ನ ಪ್ರಾಂಶುಪಾಲೆ ಖತೀಜತುಲ್ ಕುಬ್ರಾ ಮತ್ತು ವಿವಿಧ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು, ಸಂಚಾಲಕರು, ಮುಖ್ಯೋಪಾದ್ಯಾಯರು ಸೇರಿದಂತೆ ಒಟ್ಟು 200 ಪ್ರತಿನಿಧಿಗಳು ಹಾಜರಿದ್ದರು.

ಮೀಫ್ ಉಪಾಧ್ಯಕ್ಷ ಪರ್ವೇಝ್ ಅಲಿ ಸ್ವಾಗತಿಸಿದರು, ಕಾರ್ಯದರ್ಶಿ ಅನ್ವರ್ ಹುಸೈನ್ ವಂದಿಸಿದರು, ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News