×
Ad

ಮಣಿಪಾಲ-ಪೆರಂಪಳ್ಳಿಯಲ್ಲಿ ‘ಮಾಂಡವಿ ಡೌನ್‌ಟೌನ್’ ವಸತಿ ಸಮುಚ್ಚಯ

Update: 2025-06-28 22:37 IST

ಮಣಿಪಾಲ: ಗುಣಮಟ್ಟದ ಸಮುಚ್ಚಯಗಳನ್ನು ನಿರ್ಮಿಸುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಗಳಿಸಿದ ಮಾಂಡವಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯ ಪ್ರತಿಷ್ಠಿತ ಯೋಜನೆಯಾಗಿ ಮಣಿಪಾಲ-ಪೆರಂಪಳ್ಳಿ ರಸ್ತೆ ಸನಿಹದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ‘ಮಾಂಡವಿ ಡೌನ್‌ಟೌನ್’ ವಸತಿ ಸಮುಚ್ಚಯ ದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೈಗೆಟಕುವ ಬೆಲೆಯಲ್ಲಿ ವಸತಿ ಸೌಲಭ್ಯ ದೊರೆಯಲಿದೆ.

ಈ ಸಮಮುಚ್ಚಯದ ಎ, ಬಿ, ಸಿ ಟವರ್‌ಗಳಲ್ಲಿ ಒಟ್ಟು 342 ಫ್ಲ್ಯಾಟ್‌ಗಳಿದ್ದು, ನೆಲ ಅಂತಸ್ತು ಮತ್ತು 21 ಮಹಡಿಗಳು ಇರಲಿವೆ. ಕೆಳಗಿನ ಮೂರು ಮಹಡಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದ್ದು, ಅನಂತರ ಫ್ಲ್ಯಾಟ್‌ಗಳು ಇರಲಿವೆ. ಔಟ್‌ಡೋರ್ ಕಿಡ್ಸ್ ಪ್ಲೇ ಏರಿಯಾ, ಪಾರ್ಟಿ ಹಾಲ್, ಮಲ್ಟಿ ಪರ್ಪಸ್ ಜಿಮ್, ರೆಟಿಕ್ಯುಲೇಟೆಡ್ ಪೈಪ್‌ಲೈನ್ ಗ್ಯಾಸ್ ಸಿಸ್ಟಮ್, 24 ಗಂಟೆ ವಾಟರ್ ಸಪ್ಲೈ, ಜನರೇಟರ್, ಸೆಕ್ಯುರಿಟಿ ಮತ್ತು ಸಿಸಿಟಿವಿ ಕವರೇಜ್, ಪ್ರತಿ ಟವರ್‌ಗೆ 2 ಲಿಫ್ಟ್‌ ಗಳು, ಟೀಕ್‌ವುಡ್‌ನ ಮುಖ್ಯದ್ವಾರ, ಇಂಟರ್‌ಕಾಮ್ ಸೌಲಭ್ಯ, ಆಕರ್ಷಕ ಪ್ರವೇಶದ್ವಾರ, ಮಳೆನೀರು ಕೊಯ್ಲು, ಬೆಂಕಿ ಸುರಕ್ಷತೆ ಸೌಲಭ್ಯ, ಒಳಾಂಗಣ ಕ್ರೀಡೆಗೆ ಅವಕಾಶ ಹಾಗೂ ಎಲ್ಲ ಬಗೆಯ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಳ್ಳಲಿದೆ.

ಗುಣಮಟ್ಟದ ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಬಳಕೆಯಿಂದ ಪ್ರಶಾಂತ ವಾತಾವರಣದಲ್ಲಿ ನಿರ್ಮಾಣ ಗೊಳ್ಳಲಿರುವ ಸಮುಚ್ಚಯವು ವಸತಿಗೆ ಯೋಗ್ಯವಾಗಿರಲಿದೆ. ಆಸ್ಪತ್ರೆ, ಶಾಲಾ-ಕಾಲೇಜು, ಎಲ್ಲ ಧರ್ಮ ದವರ ಪ್ರಾರ್ಥನಾ ಮಂದಿರಗಳು, ಮಾರುಕಟ್ಟೆ, ಬಸ್‌ನಿಲ್ದಾಣ, ರೈಲ್ವೇ ನಿಲ್ದಾಣ ಸಮೀಪದಲ್ಲಿದ್ದು ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ. ವಾಸ್ತು ಪ್ರಕಾರ ನಿರ್ಮಾಣಗೊಳ್ಳಲಿರುವ ಸಮುಚ್ಚಯವು ಅತಿ ಹೆಚ್ಚು ಓಪನ್ ಪ್ಲೇಸ್‌ನಿಂದ ಕೂಡಿದ್ದು, ಜಾಗಿಂಗ್ ಟ್ರ್ಯಾಕ್, ಕಾನ್ಫರೆನ್ಸ್ ರೂಮ್, ಬ್ಯಾಡ್ಮಿಂಟನ್ ಕೋರ್ಟ್ ಸಹಿತ ಎಲ್ಲ ಬಗೆಯ ಸೌಕರ್ಯಗಳನ್ನು ಹೊಂದಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: www.mandavibuilders.com ಸಂಪರ್ಕಿಸಲು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಬುಕ್ಕಿಂಗ್ ಆರಂಭ

1, 2 ಮತ್ತು 3 ಬಿಎಚ್‌ಕೆ ವರೆಗಿನ ಫ್ಲ್ಯಾಟ್‌ಗಳು ಸುಸಜ್ಜಿತ ಕಾರು ಪಾರ್ಕಿಂಗ್, ಸ್ವಿಮ್ಮಿಂಗ್ ಪೂಲ್, ಕ್ಲಬ್ ಹೌಸ್‌ನಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡು 1% ಜಿಎಸ್‌ಟಿಯೊಂದಿಗೆ 35 ಲ.ರೂ. (ಕೈಗೆಟಕುವ ಬೆಲೆ)ಯಿಂದ ಪ್ರಾರಂಭಗೊಳ್ಳಲಿದೆ. ಇದೀಗ ಬುಕ್ಕಿಂಗ್ ಆರಂಭಗೊಂಡಿದ್ದು, ಗ್ರಾಹಕರಿಂದ ಬಹು ಬೇಡಿಕೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News