ರೋಟರಿ ಮಂಗಳೂರು ಸಿಟಿ ಕ್ಲಬ್‌ಗೆ ‘ರೋಟರಿ ಗ್ಲೋಬಲ್ ಎಕ್ಸೆಲೆನ್ಸ್ʼ ಶ್ರೇಷ್ಠ ಪ್ರಶಸ್ತಿ
ಮಂಗಳೂರು , ಜು. 3: ರೋಟರಿ ಮಂಗಳೂರು ಸಿಟಿ ಕ್ಲಬ್ ಸಂಸ್ಥೆಯ ಪ್ರಾಯೊಜತ್ವದಲ್ಲಿ ಅಂತರಾಷ್ಟ್ರೀಯ ರೋಟರಿ ಜಿಲ್ಲಾ 3181 ರ ಆಡಳಿತ ಸಮಿತಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಪಿಲಿಕುಲ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು.
ರೋಟರಿ ಜಿಲ್ಲೆಯ 3181 ರ ಗವರ್ನರ್‌ರಾದ ವಿಕ್ರಮ್ ದತ್ತರವರು ಸಮಾವೇಶವನ್ನು ಉದ್ಘಾಟಿಸಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ರೋಟರಿ ಜಿಲ್ಲೆಯ 3182ರ ಗವರ್ನರ್ ದೇವಾನಂದ್, ಮಾಜಿ ಗವರ್ನರ್ ಆದ ರವೀಂದ್ರ ಭಟ್, ಲಯನ್ಸ್ ಜಿಲ್ಲಾ ಗವರ್ನರ್ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಗವರ್ನರ್ ಅಲಗು ಅಲಗಪ್ಪ ದಿಕ್ಸೂಜಿ ಭಾಷಣ ಮಾಡಿದರು. ರೋಟರಿ ಮಂಗಳೂರು ಸಿಟಿ ಸಂಸ್ಥೆಗೆ ಶ್ರೇಷ್ಠ ಮಟ್ಟದ ‘ಗ್ಲೋಬಲ್ ಎಕ್ಸೆಲೆನ್ಸ್’ ಪ್ರಶಸ್ತಿಯನ್ನು ಕ್ಲಬ್‌ನ ಅಧ್ಯಕ್ಷ ಗಣೇಶ್ ಕೊಡ್ಲಮೊಗರುಗೆ ಪ್ರದಾನ ಮಾಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಹಾಯಕ ಗವರ್ನರ್ ಡಾ. ರಂಜನ್, ಸಂಸ್ಥೆಯ ಕಾರ್ಯದರ್ಶಿ ಸುದೇಶ್, ಸಂಘಟಣಾ ಸಮಿತಿ ಅಧ್ಯಕ್ಷ ಸಮಿತ್ ರಾವ್, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಅರವಿಂದ್ ಭಟ್, ಲತಾ ದತ್ತ, ಇನ್ನರ್ ವಿಲ್ ಕ್ಲಬ್‌ನ ಅಧ್ಯಕ್ಷೆ ವೈಶಾಲಿ ಕುಡ್ವ, ಮತ್ತು ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆಯ 89 ಕ್ಲಬ್‌ನ ಸುಮಾರು 800 ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.