×
Ad

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್: ವಿವಿಧ ವಿಭಾಗಗಳಲ್ಲಿ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ

Update: 2025-07-12 23:26 IST

ಮಂಗಳೂರು, ಜು.12: ನಗರದ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್‌ನ 3ನೇ ದಿನವಾಗಿರುವ ಶನಿವಾರ ವಿವಿಧ ವಿಭಾಗಗಳಲ್ಲಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು.

ಅಂಡರ್ -13 ಬಾಲಕಿಯರ ವಿಭಾಗದಲ್ಲಿ ಸಾಕ್ಷಿ ಸಂತೋಷ, ಅಂಡರ್ 13 ಬಾಲಕರ ವಿಭಾಗದಲ್ಲಿ ಸಿದ್ದಾಂತ್ ಎಂ, ಅಂಡರ್ - 15 ಬಾಲಕಿಯರ ವಿಭಾಗದಲ್ಲಿ ತನಿಷ್ಕಾ ಕಪಿಲ್ ಕಾಲಭೈರವ್ ಮತ್ತು ಅಂಡರ್ - 15 ಬಾಲಕರ ವಿಭಾಗದಲ್ಲಿ ತಮೋಘ್ನಾ ಎಂ ಪ್ರಶಸ್ತಿ ಪಡೆದರು.

ವಿವಿಧ ವಿಭಾಗಗಳ ಫೈನಲ್ ಪಂದ್ಯಗಳಲ್ಲಿ ವಿಜೇತರ ವಿವರ ಇಂತಿವೆ

ಅಂಡರ್ - 13 ಬಾಲಕಿಯರು: ವಿನ್ನರ್ ಸಾಕ್ಷಿ ಸಂತೋಷ, ರನ್ನರ್: ಯುಕ್ತ ಹರ್ಷ, ಎರಡನೇ ರನ್ನರ್ - ರಿಯಾ ಹರ್ಟಿಸ್ ಮತ್ತು ಆಧ್ಯ ಎಂ

ಅಂಡರ್ - 13 ಬಾಲಕರ ವಿಭಾಗ

ವಿನ್ನರ್ : ಸಿದ್ದಾಂತ್ ಎಂ, ರನ್ನರ್: ಸಾತ್ವಿಕ್ ಎಂ, ಎರಡನೇ ರನ್ನರ್ - ಮೋಹಿತ್ ದೀಪಕ್ ಬೆಳವಾಡಿ ಮತ್ತು ಸುಚೇತ್ ಸಿ ಧರೆನ್ನವರ್

ಅಂಡರ್ - 15 ಬಾಲಕಿಯರು:

ವಿನ್ನರ್ - ತನಿಷ್ಕಾ ಕಪಿಲ್ ಕಾಲಭೈರವ್, ರನ್ನರ್ - ಸಾಕ್ಷಿ ಸಂತೋಷ, ಎರಡನೇ ರನ್ನರ್ - ರಾಶಿ ವಿ ರಾವ್ ಮತ್ತು ಕ್ರಿಶಾ ಪಿ ಕರ್ಕೇರಾ

ಅಂಡರ್ - 15 ಬಾಲಕರು : 

ವಿನ್ನರ್ - ತಮೋಘ್ನಾ ಎಂ, ರನ್ನರ್- ಸಿದ್ದಾಂತ್ ಎಂ, ಎರಡನೇ ರನ್ನರ್ - ಸಾತ್ವಿಕ್ ಎಂ ಮತ್ತು ವೇದಾಂತ್ ವಶಿಷ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News