×
Ad

ಪೆರ್ನೆ ವೆಲ್ಫೇರ್ ಅಸೋಸಿಯೇಶನ್‌ನಿಂದ ಸಿಎ ತೇರ್ಗಡೆ ಹೊಂದಿದ ವಿದ್ಯಾರ್ಥಿಗೆ ಸನ್ಮಾನ

Update: 2025-07-14 18:46 IST

ಮಂಗಳೂರು, ಜು.14: ವೆಲ್ಫೇರ್ ಅಸೋಸಿಯೇಶನ್ ಪೆರ್ನೆ ಇದರ ವತಿಯಿಂದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ ಮುಹಮ್ಮದ್ ಇಯಾಝ್ ಅವರನ್ನು ಪೆರ್ನೆಯಲ್ಲಿ ಸನ್ಮಾನಿಸಲಾಯಿತು.

ಪೆರ್ನೆ ಇಸ್ಮಾಯಿಲ್- ರುಕಿಯಾ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಇಯಾಝ್ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಸಂಸ್ಥೆಯ ಪದಾಧಿಕಾರಿಗಳು ಆಶಿಸಿದರು.

ಈ ಸಂದರ್ಭ ಲತೀಫ್ ಪುರಿಯ, ಆಶ್ರಫ್ ಪಿ.ಎಸ್., ಸಮದ್ ಪೆರ್ನೆ, ಝುಬೈರ್, ಇರ್ಷಾದ್ ಎಸ್.ಎ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News