×
Ad

ಮಂಗಳೂರು: ನೂತನ ಡಿಸಿಪಿ ಅಧಿಕಾರ ಸ್ವೀಕಾರ

Update: 2025-07-18 21:24 IST

ಮಂಗಳೂರು, ಜು.18: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಮಿಥುನ್ ಎಚ್.ಎನ್. ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಮಿಥುನ್ ಎಚ್.ಎನ್. ಉುಪಿ ಕರಾವಳಿ ಕಾವಲು ಪಡೆಯ ಎಸ್‌ಪಿಯಾಗಿದ್ದರು. ಈ ಹಿಂದೆ ಡಿಸಿಪಿಯಾಗಿದ್ದ ಸಿದ್ದಾರ್ಥ ಗೋಯಲ್ ಅವರನ್ನು ಬಾಗಲಕೋಟೆ ಎಸ್‌ಪಿಯಾಗಿ ನಿಯುಕ್ತಿ ಮಾಡಲಾಗಿದ. ಅವರ ಸ್ಥಾನಕ್ಕೆ ಜು.14ರಂದು ನಕ್ಸಲ್ ನಿಗ್ರಹ ಪಡೆಯ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಗುರುವಾರ ಈ ಆದೇಶವನ್ನು ರದ್ದು ಪಡಿಸಿ ನಕ್ಸಪ್ ನಿಗ್ರಹ ಪಡೆಯ ಹುದ್ದೆಯಲ್ಲಿ ಮುಂದುವರಿಸಿದೆ. ಮಿಥುನ್ ಅವರನ್ನು ನೇಮಕಗೊಳಿಸಿ ಸರಕಾರ ಗುರುವಾರ ಆದೇಶಿಸಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News