ಉಳ್ಳಾಲ: ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಶನ್ ಮಹಾಸಭೆ
ಉಳ್ಳಾಲ: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್, ಉಳ್ಳಾಲ ವಲಯ ಸಮಿತಿಯ ವಾರ್ಷಿಕ ಮಹಾಸಭೆ ತೊಕ್ಕೊಟ್ಟು ಖಾಸಗಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಹುನೈನ್ ಹುಸೇನ್ ದುಆ ನೆರವೇರಿಸಿದರು.
ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್ ನ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿ ಮಂಗಳೂರು ರಿಯಾಝ್ ಸ್ವಾಗತಿಸಿದರು. ವಲಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು
ರಾಜ್ಯ ಸಮಿತಿ ಸದಸ್ಯ ಫಯಾಝ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ದಿಕ್ಸೂಚಿ ಭಾಷಣ ಮಾಡಿದರು.
ಬಳಿಕ ಉಳ್ಳಾಲ ವಲಯ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆಎಂಕೆ ಮಂಜನಾಡಿ, ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಾಗರ್, ಉಪಾಧ್ಯಕ್ಷರಾಗಿ ನಾಸಿರ್ ಅಹ್ಮದ್ ಸಾಮಣಿಗೆ, ಅಬೂಬಕರ್ ಸಿದ್ದೀಕ್, ರಶೀದ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಗಳೂರು ರಿಯಾಝ್, ಕಾರ್ಯದರ್ಶಿಗಳಾಗಿ ಸುಲೈಮಾನ್ ಫುರ್ಕಾನಿ ಕಲ್ಲಾಪು, ಶರೀಫ್ ಯು.ಬಿ., ಹುನೈನ್ ಹುಸೇನ್, ಕೋಶಾಧಿಕಾರಿಯಾಗಿ ಮುಹಮ್ಮದ್ ರಿಯಾಝ್ ಹಳೆಕೋಟೆ, ಸಂಘಟನಾ ಕಾರ್ಯದರ್ಶಿಗಳಾಗಿ ರಹ್ಮಾನ್ ಎಂ.ಸಿ., ಇಸ್ಮಾಯೀಲ್ ಕಿನ್ಯ, ತಮೀಮ್ ಉಳ್ಳಾಲ, ಅಬ್ದಾಸ್ ಕೆ.ಸಿ.ರೋಡ್, ಸ್ಪರ್ಧಾ ಆಯ್ಕೆ ಸಮಿತಿಯ ಸದಸ್ಯರಾಗಿ ನಝೀರ್ ಅಲ್ಫಾ, ಫಯಾಝ್ ಪಟ್ಲ, ಇಮ್ತಿಯಾಝ್ ಉಳ್ಳಾಲ ,ಮಾಧ್ಯಮ ಕಾರ್ಯದರ್ಶಿ ಯಾಗಿ ರಿಶಾನ್ ಹಳೆಕೋಟೆ ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್, ಮನ್ಸೂರ್ ಅರ್ಕಾಣ, ಶರೀಫ್ ಪಾಂಡೇಲ್ ಪಕ್ಕ, ಅಶ್ಫಾಕ್ ಇನೋಳಿ, ಅಶ್ರಫ್ ಆಝಾದ್ ನಗರ, ಮಿಸ್ಬಾ ಅಳೇಕಲ್ ಆಯ್ಕೆಯಾದರು.