ನ.7, 8ರಂದು ನಿಟ್ಟೆ ವಿಶ್ವ ವಿದ್ಯಾನಿಲಯದ 15ನೇ ಘಟಿಕೋತ್ಸವ
ಮಂಗಳೂರು : ನಿಟ್ಟೆ ವಿಶ್ವ ವಿದ್ಯಾನಿಲಯದ 15ನೇ ಘಟಿಕೋತ್ಸವವು ನ.7 ಮತ್ತು 8ರಂದು ಮಂಗಳೂರಿನ ದೇರಳಕಟ್ಟೆ ಕ್ಷೇಮ ಕ್ಯಾಂಪಸ್ (ನ 7)ಹಾಗೂ ಕಾರ್ಕಳದ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ(ನ.8ರಂದು) ನಡೆಯಲಿದೆ ಎಂದು ವಿಶ್ವವಿದ್ಯಾನಿಲಯ ಉಪ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟಿಕೋತ್ಸವದಲ್ಲಿ 1999 ಪದವೀಧರರಿಗೆ ಪದವಿ ಪ್ರಧಾನ ಮಾಡಲಾಗುತ್ತದೆ. ಈ ಪೈಕಿ 28 ಡಾಕ್ಟರೇಟ್, 959 ಸ್ನಾತಕೋತ್ತರ ಪದವಿಧರರಿಗೆ, 1054 ಪದವೀಧರರಿಗೆ, 5ಫೆಲೋಶಿಫ್, 2 ಪಿ.ಜಿ.ಡಿಪ್ಲೊಮಾ ಪದವಿಧರರಿಗೆ ಪದವಿ ನೀಡಲಾಗುವುದು.
ದಿ.ಡಾ.ಮಧುಕರ ಶಾಂತಾರಾಮ ಕೆ ಯವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಲಾಗುವುದು. ಕುಲಾಧಿಪತಿ ಎನ್ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಹೊಸದಿಲ್ಲಿ ಏಮ್ಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದ ಎರಡನೇ ಕಾರ್ಯಕ್ರಮವು ನ.8ರಂದು ನಿಟ್ಟೆ ವಿ.ವಿ. ಆವರಣದಲ್ಲಿ ನಡೆಯಲಿದ್ದು, ಕೇರಳದ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಸಿದ್ದು ಪಿ.ಅಲಗೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಎಂ.ಎಸ್.ಮೂಡಿತ್ತಾಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾಂಗ ನಿಯಂತ್ರಕ ಪ್ರಸಾದ್ ಬಿ ಶೆಟ್ಟಿ, ಹಾಗೂ ವಿನೋದ್ ಆರ್., ನೇಸರ ಕಾಡನಕುಪ್ಪೆ, ಹೇಮಂತ್ ಉಪಸ್ಥಿತರಿದ್ದರು.