×
Ad

ಇಡ್ಕಿದು, ಕುಳ, ವಲಯ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ "ನರೇಗಾ ಬಚಾವೋ ಸಂಗ್ರಾಮ"

Update: 2026-01-31 10:25 IST

ವಿಟ್ಲ : ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವು ಯುಪಿಎ ಸರಕಾರದ ಮಹತ್ವಕಾಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಲು ಹೊರಟು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರನ್ನು ಮರೆಮಾಚಾಲು ಹಾಗೂ, ಬಡ ಕೃಷಿ ಕೂಲಿ ಕಾರ್ಮಿಕರ ಹೊಟ್ಟೆಗೆ ಹೊಡೆಯಲು ಮುಂದಾಗಿರುವುದನ್ನು ವಿರೋಧಿಸಿ ಇಡ್ಕಿದು, ಕುಳ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಇಡ್ಕಿದು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ರವರು ಮಾತನಾಡಿ ಕೇಂದ್ರ ಸರಕಾರವು ತರಾತುರಿಯಲ್ಲಿ ಜನಸ್ನೇಹಿ ಕಾರ್ಯಕ್ರಮವನ್ನು ಹಾಗೂ ಅದರ ಮೂಲ ಉದ್ದೇಶವನ್ನು ತಿರುಚಿ ಜನರ ಮೇಲೆ ಹೆರಲು ಹೊರಟಿರುವ ಕ್ರಮವನ್ನು ಖಂಡಿಸಿದರು.

ಈ ಪ್ರತಿಭಟನೆಯಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ರಾಜ್ಯ ಉಪಾಧ್ಯಕ್ಷ ಸಿದ್ದೀಕ್ ಸೂರ್ಯ, ವಿಟ್ಲ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಕಾರ್ಯಡಿ, ಫಾರೂಕ್ ಮಿತ್ತೂರ್, ಶಾಫಿ ಸೂರ್ಯ, ಬೂತ್ ಅಧ್ಯಕ್ಷರುಗಳಾದ ಹಂಝ ಕಂದಕ್ ಮಿತ್ತೂರು, ಅಬ್ದುಲ್ ಲತೀಫ್ ದಲ್ಕಾಜೆ, ಬಾಲಕೃಷ್ಣ ಪೂಜಾರಿ ಪೆಳತ್ತಾಡಿ, ಅಶ್ರಫ್ ಕೆಜಿಎನ್, ಇಕ್ಬಾಲ್ ಕಸ್ತೂರಿ, ಪಕ್ಷ ಪ್ರಮುಖರಾದ ಸಾದಿಕ್ ಅಕ್ಕರೆ ಮಿತ್ತೂರು, ಅಬೂಬಕ್ಕರ್ ಗೋಡನ್, ಚೇತನ್ ಗೌಡ ಉರಿಮಜಲು, ಹಂಝ ಕಾರ್ಯಡಿ, ಲತೀಫ್ ಕಾರ್ಯಡಿ, ಇಬ್ರಾಹಿಂ ಮಿತ್ತೂರ್, ಶಾಕಿರ್ ಅಳಕೆಮಜಲು, ಸುಕೇಶ್ ಕುಳ, ಟಿ. ಮೊಹಮ್ಮದ್ ಕಾರ್ಯಡಿ ಮುಂತಾದವರು ಉಪಸ್ಥಿತರಿದ್ದರು.

ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ ಸ್ವಾಗತಿಸಿ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಳಕೆಮಜಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News