ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಗೈರು ಹಾಜರಿ ಹಾಗೂ ನಿವೇಶನ ನೀಡುವುದರಲ್ಲಿ ಬಡವರಿಗೆ ಆಗಿರುವ ಅನ್ಯಾಯ ವಿರೋಧಿಸಿ ಅಧಿಕಾರಿಗಳ ವಿರುದ್ಧ ಆಡಳಿತಾರೂಢ ಮತ್ತು ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು,ಗ್ರಾಮಕರಣಿಕ ಸಭೆಗೆ ಬಂದು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಬಡವರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್, ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದರು.
ಸರ್ಕಾರಿ ಜಾಗ ಗಡಿ ಗುರುತು ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚೆ ಮಾತ್ರ ಆಗಿದೆ.ಈ ವರೆಗೆ ಕೆಲಸ ಆಗುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಅವರು,ಬಡವರಿಗೆ ವಸತಿಗೆ ಜಾಗ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು 2011 ರಿಂದ ಈವರೆಗೆ ನೀಡದೇ ವಂಚನೆ ಮಾಡುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ಕ್ರಮ ಆಗುತ್ತಿಲ್ಲ, ಯಾಕೆ ನಿವೇಶನ ನೀಡುತ್ತಿಲ್ಲ,2011 ರಿಂದ ಈವರೆಗೆ ಅರ್ಜಿ ಹಾಕಿದ ಬಡವರಿಗೆ ಯಾಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಈ ವಿಚಾರದಲ್ಲಿ ನಿರಂತರ ಹೋರಾಟ ಇದೆ ಎಂದು ಎಚ್ಚರಿಸಿದರು.
ಅಭಿವೃದ್ಧಿ ಕಾಮಗಾರಿ ಗೆ ಅನುದಾನ ಮಂಜೂರು ಆಗಿ ಕೆಲವು ಕಡೆ ಅಭಿವೃದ್ಧಿ ಕಾಮಗಾರಿ ಆಗಿ ಹಣ ಉಳಿಕೆ ಆಗಿದೆ. ಆದರೂ ಕೂಡ ನಾಲ್ಕು ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಆಗಿಲ್ಲ.ಕೆಲಸ ಆಗದ ವಾರ್ಡ್ ಗಳ ಕೆಲಸ ಮಾಡಿಸಿ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು.
ಸುಜಿತ್ ಮಾಡೂರು ಅಭಿವೃದ್ಧಿ ಕಾಮಗಾರಿ ಗೆ ಹಣ ಇಡಿ, ಇದರಲ್ಲಿ ತಾರತಮ್ಯ ನೀತಿ ಬೇಡ ಎಂದು ಆಗ್ರಹಿಸಿದರು.
ಅಭಿವೃದ್ಧಿ ಯಲ್ಲಿ ತಾರತಮ್ಯ ಆಗಿಲ್ಲ.ಎಲ್ಲದಕ್ಕೂ ದಾಖಲಾತಿ ಇದೆ. ಈ ವಿಚಾರದಲ್ಲಿ ತಪ್ಪು ಸಂದೇಶ ನೀಡುವುದು ಬೇಡ ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು.
ಪ್ರತಿ ವಾರ್ಡ್ ಗೆ ಐದು ಲಕ್ಷ ಕೊಟ್ಟಿದ್ದೀರಿ.ಬಹಳಷ್ಟು ಕಡೆ ಕೆಲಸ ಆಗಿದೆ.ನಮ್ಮ ವಾರ್ಡ್ ಗೆ ಮೀಸಲಿಟ್ಟು ಹಣ ದ ಟೆಂಡರ್ ಪ್ರಕ್ರಿಯೆ ಯಾಕಾಗಿಲ್ಲ, ಈ ತಾರತಮ್ಯ ಯಾಕೆ ಬೇಕು ಎಂದು ಅಹ್ಮದ್ ಅಜ್ಜಿನಡ್ಕ ಪ್ರಶ್ನಿಸಿದರು.
27 ಲಕ್ಷ ನೀರು ಬಿಲ್ ಬಾಕಿ ಇದೆ ಎಂದು ಚರ್ಚೆ ಆಗಿದೆ. ಈ ಬಗ್ಗೆ ಯಾವ ಕ್ರಮ ಆಗಿದೆ ಎಂಬ ಪ್ರಶ್ನೆಗೆ ಮಾಲಿನಿ ಅವರು ಈಗಾಗಲೇ ಒಂದು ಲಕ್ಷ ವಸೂಲಿ ಆಗಿದೆ.ಉಳಿದ ಮೊತ್ತ ಶೀಘ್ರ ಮಾಡಲಾಗುವುದು ಎಂದರು.
ಮೆಸ್ಕಾಂ ಜೆಇ ಮಾರಪ್ಪ ವಿದ್ಯುತ್ ಸಮಸ್ಯೆ ಮತ್ತದರ ಪರಿಹಾರ ಬಗ್ಗೆ ಮಾಹಿತಿ ನೀಡಿದರು.
ಕೋಟಿ ಕಾರ್ ವ್ಯಾಪ್ತಿಯಲ್ಲಿ ಗೂಡಂಗಡಿ ಬಳಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವ ಬಗ್ಗೆ ದೂರು ಬಂದಿವೆ. ಮದ್ಯಪಾನ ಮಾಡಿ ಪಾರ್ಕಿಂಗ್ ಮಾಡುತ್ತಾರೆ ಎಂಬ ಸಂಶಯವೂ ಇದೆ. ಈ ರೀತಿ ಪಾರ್ಕಿಂಗ್ ಮಾಡುವುದು ಕಂಡಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದು ಟ್ರಾಫಿಕ್ ಎಎಸ್ಐ ಸಂತೋಷ್ ಪಡೀಲ್ ಮಾಹಿತಿ ನೀಡಿದರು.
ಎಚ್ ಪಿಟಿ ಕ್ಯಾನ್ಸರ್ ಇದೆ. ಇದು ವೈರಸ್ ನಿಂದ ಬರುತ್ತದೆ. ಈ ಮಾರಕ ಕಾಯಿಲೆಗೆ ಲಸಿಕೆ ಇದೆ. ಸರ್ಕಾರ ದಿಂದ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆ ಯಲ್ಲಿ ಒಂದು ಡೋಸ್ ಔಷಧಿ ಗೆ 11ಸಾವಿರ ಇದೆ. ವ್ಯಾಕ್ಸಿನ್ ಶೀಘ್ರ ಬರಲಿದೆ. ಈ ವ್ಯಾಕ್ಸಿನ್ ನೀಡುವ ಬಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಯಲ್ಲಿ 14 ರಿಂದ 15 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಆರೋಗ್ಯ ಅಧಿಕಾರಿ ತಿಳಿಸಿದರು.
ಅನುದಾನ ಕೋರಿ ಪ್ರತಿಭಟನೆ
ಪನೀರ್ ನಲ್ಲಿ ಮಳೆ ಬಂದು ಕಾಂಪೌಂಡ್ ಗೋಡೆ ಹೋಗಿದೆ.ಈ ವಾರ್ಡ್ ಗೆ ತುರ್ತು ಕಾಮಗಾರಿಗೆ ಶಾಸಕ ರ ಫಂಡ್ ಸಿಕ್ಕಿಲ್ಲ. ಪಂಚಾಯತ್ ಕೂಡ ನೀಡುವುದಿಲ್ಲ. ಇದರಿಂದ ನನಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಎಸ್ ಡಿಪಿಐ ಸದಸ್ಯೆ ಸಲೀಮಾ ಬಿ ಅಧ್ಯಕ್ಷ ರ ಟೇಬಲ್ ಮುಂದೆ ಕುಳಿತು ಆಡಳಿತದ ವಿರುದ್ಧ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಎಲ್ಲಾ ವಾರ್ಡ್ ಗೆ ಅನುದಾನ ಇಟ್ಟ ಪಂಚಾಯತ್ ನನ್ನ ವಾರ್ಡ್ ನ್ನು ಕಡೆಗಣನೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.