×
Ad

ಆನ್‌ಲೈನ್ ವಂಚನೆ: ದೂರು ದಾಖಲು

Update: 2023-11-08 20:42 IST

ಮಂಗಳೂರು, ನ.8: ಟೆಲಿಗ್ರಾಂ ಆ್ಯಪ್‌ನಲ್ಲಿ ‘ಸ್ಟಾರ್ ರೇಟಿಂಗ್’ ಟಾಸ್ಕ್ ನೀಡಿ 21.51 ಲ.ರೂ. ವರ್ಗಾಯಿಸಿಕೊಂಡು ವಂಚಿಸಿ ರುವ ಬಗ್ಗೆ ಸೆನ್ ಠಾಣೆಯಲ್ಲಿ ದಾಖಲಾಗಿವೆ.

ನ.4ರಂದು ತನ್ನ ವಾಟ್ಸ್‌ಆ್ಯಪ್ ಸಂಖ್ಯೆಗೆ +84334590184 ಸಂಖ್ಯೆಯಿಂದ ಬಂದ ಮೆಸೇಜ್‌ನಲ್ಲಿ ಲಿಂಕ್ ತೆರೆದಾಗ ತನ್ನ ಸಂಖ್ಯೆ ಟೆಲಿಗ್ರಾಂ ಆ್ಯಪ್‌ಗೆ ಸೇರ್ಪಡೆಗೊಂಡಿತು. ಬಳಿಕ ತನಗೆ ಸ್ಟಾರ್ ರೇಟಿಂಗ್ ಆ್ಯಪ್ ಮೂಲಕ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವಂತೆ ಸೂಚಿಸಲಾಯಿತು. ಅದನ್ನು ನಂಬಿದ ತಾನು 5,000 ರೂ. ಸಂದಾಯ ಮಾಡಿದರು. ಅದಕ್ಕೆ ಪ್ರತಿಯಾಗಿ ತನ್ನ ಖಾತೆಗೆ 6,500 ರೂ. ಜಮೆಯಾಯಿತು. ಬಳಿಕ ಗ್ರೂಪ್ ಮರ್ಚೆಂಟ್ ಟಾಸ್ಕ್ ಪೂರ್ಣಗೊಳಿಸಲು ಸೂಚಿಸಲಾಯಿತು. ಅದಕ್ಕೆ ಹಣ ಪಾವತಿಸಿದರೆ ಹೆಚ್ಚು ಹಣ ವಾಪಸ್ ನೀಡುವುದಾಗಿ ತಿಳಿಸಲಾಯಿತು. ಅದನ್ನು ನಂಬಿದ ತಾನು ಮತ್ತಷ್ಟು ಹಣ ಪಾವತಿಸಿದೆ. ಬಳಿಕ ತನ್ನ ಖಾತೆಯಿಂದ ಹಂತ ಹಂತವಾಗಿ ನ.4ರಿಂದ ನ.7ರವರೆಗೆ 21.51 ಲ.ರೂ. ಹಣವನ್ನು ಅಕ್ರಮ ವಾಗಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News