ಮಹಿಳೆಗೆ ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2025-07-26 22:25 IST
ಮಂಗಳೂರು, ಜು.26: ಕೌನ್‌ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ ತಾವು 8 ಲಕ್ಷ ರೂ. ಗೆದ್ದಿರುವುದಾಗಿ ಹೇಳಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ನಗರದ ಮಹಿಳೆಯಿಂದ 7 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಡೆದು ವಂಚಿಸಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.23ರಂದು ಮನೆಯಲ್ಲಿ ಫೇಸ್‌ಬುಕ್ ಅಪ್ಲಿಕೇಷನ್ ನೋಡುತ್ತಿದ್ದಾಗ ಕೌನ್ ಬನೇಗಾ ಕರೋಡ್ ಪತಿ ಪ್ರಶ್ನೆಗೆ ಅದರಲ್ಲಿದ್ದ ಲಿಂಕ್‌ನ್ನು ಓಪನ್ ಮಾಡಿ ಉತ್ತರಿಸಿದ್ದೆ. ಜು.27ರಂದು ಅಪರಿಚಿತ ವ್ಯಕ್ತಿಯು ತನಗೆ ಕರೆ ಮಾಡಿ ನೀವು 8 ಲಕ್ಷ ರೂ. ಗೆದ್ದಿರುವುದಾಗಿ ಹೇಳಿದ್ದ. ಬಳಿಕ ಆಧಾರ್ ಕಾರ್ಡ್ ನಂಬರ್ ಮತ್ತು ಪಾನ್ ಕಾರ್ಡ್ ಹಾಗೂ ಪೊಟೋ ಕಳುಹಿಸಲು ತಿಳಿಸಿದ. ಅದರಂತೆ ತಾನು ಅದನ್ನೆಲ್ಲಾ ಕಳುಹಿಸಿದೆ. ಬಳಿಕ ಅಪರಿಚಿತ ವ್ಯಕ್ತಿ ನೋಂದಣಿ ಶುಲ್ಕ ಎಂದು ಹೇಳಿ ಹಂತಹಂತವಾಗಿ 7,76,947ರೂ. ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.