ಪಿ.ಎ. ಫಾರ್ಮಸಿ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ
ಮಂಗಳೂರು: ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಹೊಸ ಬ್ಯಾಚ್‍ನ ಓರಿಯಂಟೇಶನ್ ಕಾರ್ಯಕ್ರಮವು ನಡುಪದವಿನ ಪೇಸ್ ಆಡಿಟೋರಿಯಂನಲ್ಲಿ ನಡೆಯಿತು.
ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇದರ ಮಾಜಿ ಅಧ್ಯಕ್ಷ ಗಣೇಶ್ ಕಾಮತ್ ವಿದ್ಯಾರ್ಥಿ ಕೈಪಿಡಿ ಬಿಡುಗಡೆ ಗೊಳಿಸಿ ವಿದ್ಯಾರ್ಥಿಗಳು ಜೀವನದಲ್ಲಿ ಅಡೆತಡೆಗಳು ಎದುರಾದಾಗ ಎದೆಗುಂದದೆ ಮುನ್ನಡೆಯಬೇಕು ಹಾಗೂ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಕಠಿಣ ಪರಿಶ್ರಮ ಮತ್ತು ಜ್ಞಾನದ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಿ.ಎ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ರಮೀಝ್ ಎಂ.ಕೆ, ಪಿ.ಎ. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸಫ್ರಾಝ್ ಜೆ ಹಾಶಿಂ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು. ಪಿ.ಎ. ಕಾಲೇಜಿನ ಸ್ಟೂಡೆಂಟ್ ಅಫ್ಯಾರ್ಸ್ ಡೀನ್ ಡಾ. ಸಯ್ಯದ್ ಅಮೀನ್ ಅಹಮದ್ ಕಾಲೇಜಿನ ನೀತಿ ನಿಯಮಗಳನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಮಾತನಾಡಿ "ವಿದ್ಯಾರ್ಥಿಗಳು ಗುರಿಯನ್ನು ನಿಗದಿಪಡಿಸಿ ನಿರಂತರ ಪಯತ್ನದೊಂದಿಗೆ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯ" ಎಂದರು. ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ಎ.ಜಿ.ಎಂ ಶರ್ಫುದ್ಧೀನ್ ಪಿ.ಕೆ. ಪಿ.ಎ. ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ಸಜೀಸ್ ರಘುನಾಥನ್, ಪಿ.ಎ. ಪೋಲಿಟೆಕ್ನಿಕ್ ಪ್ರಾಂಶುಪಾಲ ಪ್ರೊ. ಕೆ.ಪಿ. ಸೂಫಿ, ಅಡ್ಮಿಶನ್ ಅಫೀಸರ್ ಶಫಿನಾಝ್, ಪಿ.ಎ. ಫಾರ್ಮಸಿ ಕಾಲೇಜು ಉಪ ಪ್ರಾಂಶುಪಾಲ ಡಾ. ಮುಹಮ್ಮದ್ ಮುಬೀನ್ ಉಪಸ್ಥಿತರಿದ್ದರು. ಪ್ರೊಫೆಸರ್ ಡಾ. ರಜಿಶಾ ಸ್ವಾಗತಿಸಿದರು. ಸಾಹಿಲ್ ಪ್ರಾರ್ಥಿಸಿದರು, ತ್ರಿವೇಣಿ ಮತ್ತು ಧನ್ಯಾ ನಿರೂಪಿಸಿದರು. ನಿಶ್ಮಿತಾ ವಂದಿಸಿದರು.