ಪಜೀರು: ಕಲ್ಲಳಬೆಟ್ಟು ಉಜ್ಜೋಡು ರಸ್ತೆಗೆ ಶಿಲಾನ್ಯಾಸ
Update: 2025-07-24 14:08 IST
ಕೊಣಾಜೆ: ಪಜೀರು ಗ್ರಾಮದ ಗ್ರಾಮಚಾವಡಿ ಬಳಿಯಿಂದ ಉಜ್ಜೋಡು ಕಲ್ಲಲಬೆಟ್ಟು ಪಿಲಿಚಾಮುಂಡಿ ದೈವಸ್ಥಾನ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಪಜೀರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಫೀಕ್ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ರಮೇಶ್ ಆಚಾರ್ಯ, ಪಜೀರು ಪಂಚಾಯತ್ ಮಾಜಿ ಅಧ್ಯಕ್ಷರಾದ ಭರತ್ ರಾಜ್ ಶೆಟ್ಡಿ, ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಪೆರ್ನ, ಮುಖಂಡರಾದ ಶೇಖರ್ ಬೀಜಗುರಿ, ರಾಧಾಕೃಷ್ಣ ರೈ ಮಾಜಿ ಉಪಾಧ್ಯಕ್ಷ ಮಹಮ್ಮದ್ ಪಾಣೇಲ,ಮಾಜಿ ಅಧ್ಯಕ್ಷರಾದ ನಝೀರ್ ಮೊಯ್ದಿನ್, ಸ್ಥಳೀಯ ಮುಖಂಡರಾದ ಸಂದೀಪ್ ರೈ, ಸುದೀರ್ ರೈ, ರವಿ ಸಾಮಾಣಿ, ದಿಲೀಪ್ ರೈ, ಶಾಫಿ ಪಾಣೇಲ, ಎಸ್ ಅಬ್ದುಲ್ ಹಾಜಿ ಸಾಂಬಾರ್ ತೋಟ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್ ಉಪಾಧ್ಯಕ್ಷರಾದ ಪ್ಲೋರಿನ್ ಡಿಸೋಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.