×
Ad

ದ.ಕ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

Update: 2024-09-25 13:04 IST

ಮಂಗಳೂರು: ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ ಜನ್ಮದಿನಾಚರಣೆಯು ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋನಪ್ಪ ಭಂಡಾರಿಯವರು, "ದೀನ ದಯಾಳ್ ಉಪಾಧ್ಯಾಯ ಅವರ ತ್ಯಾಗ ಪರಿಶ್ರಮ ಈಗಿನ ನಮ್ಮ ಬಿಜೆಪಿ ಕಾರ್ಯಕರ್ತರಿಗೂ ಪ್ರೇರಣೆ ಹಾಗೂ ದಾರಿದೀಪವಾಗಿದೆ" ಎಂದರು.

ಈ ಕಾರ್ಯಕ್ರಮದಲ್ಲಿ  ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮ.ನ.ಪಾ. ಮೇಯರ್ ಮನೋಜ್ ಕೋಡಿಕಲ್ ಹಾಗೂ ಉಪ ಮೇಯರ್ ಭಾನುಮತಿ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಕೇಶ್ ರೈ ನಿರ್ವಹಣೆ ಮಾಡಿದರು. ಮಂಜುಳಾ ರಾವ್ ಅವರು ಧನ್ಯವಾದ ಸಮರ್ಪಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News