ಪಿಲಿಚಂಡಿಕಲ್ಲು: ಡಿ.23ರಂದು ನಮ್ಮೂರ ಶಾಲಾ ಹಬ್ಬ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Update: 2025-12-21 16:21 IST
ಬೆಳ್ತಂಗಡಿ: ದ.ಕ. ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು, ಗುರುವಾಯನಕೆರೆ ಇಲ್ಲಿ ಡಿ. 23 ರಂದು ನಮ್ಮೂರ ಶಾಲಾ ಹಬ್ಬ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಲಿದೆ.
ಡಿ. 23 ರಂದು ಬೆಳಿಗ್ಗೆ 10.30 ರಿಂದ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಂಜೆ 5 ರಿಂದ 'ನಮ್ಮೂರ ಹಬ್ಬ' ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಶಾಲಾಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಲಂದರ್ ಬಿ.ಎಚ್. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.