×
Ad

ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ

Update: 2025-12-19 19:54 IST

ಮಂಗಳೂರು, ಡಿ.19: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸುರೇಂದ್ರ ಕಂಬಳಿಯ ಅಧ್ಯಕ್ಷತೆಯಲ್ಲಿ ಮಂಗಳೂರು ತಾಪಂ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಡಿ.23ರಂದು ನಗರದ ಪುರಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದ ತಯಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮಾವೇಶಕ್ಕೆ ಬರುವ ಫಲಾನುಭವಿಗಳನ್ನು ಕರೆತರಲು ನಗರ ಹಾಗೂ ಗ್ರಾಮಾಂ ತರ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳ ವ್ಯವಸ್ಥೆ ಮಾಡಿಸುವಂತೆ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿಗೆ ನೋಂದಣಿ ಮಾಡಿಕೊಳ್ಳುವ ಉದ್ದೇಶದಿಂದ ಸಮಾವೇಶದಲ್ಲಿ ಮಳಿಗೆಗಳನ್ನು ಹಾಕುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮಂಗಳೂರು ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ ಸ್ವಾಗತಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಅಲ್‌ಸ್ಟನ್ ಡಿಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಪ್ರಶಾಂತ್ ಎಸ್., ನವಾಝ್, ಶೈಲಾ ನೀತಾ ಡಿಸೋಜ, ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ, ಮುಹಮ್ಮದ್ ಮುಸ್ತಫ, ತಾಪಂ ಸಹಾಯಕ ಲೆಕ್ಕಧಿಕಾರಿ ಪರಮೇಶ್ವರ, ತಾಪಂ ವ್ಯವಸ್ಥಾಪಕಿ ಸುವರ್ಣಾ ಹೆಗಡೆ, ವಿಷಯ ನಿರ್ವಾಹಕ ಹಾರಿಸ್, ತಾಲೂಕು ಐಇಸಿ ಸಂಯೋಜಕಿ ನಿಶ್ಮಿತ ಬಿ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News