×
Ad

ಪಚ್ಚನಾಡಿ ನಿರಾಶ್ರಿತರ ಕೇಂದ್ರದಿಂದ ಏಳು ಮಂದಿ ನಾಪತ್ತೆ: ಪ್ರಕರಣ ದಾಖಲು

Update: 2025-12-19 21:16 IST

ಮಂಗಳೂರು, ಡಿ.19: ನಗರ ಹೊರವಲಯದ ಪಚ್ಚನಾಡಿ ಗ್ರಾಮದ ನಿರಾಶ್ರಿತರ ಪರಿಹಾರ ಕೇಂದ್ರದಿಂದ ಏಳು ಮಂದಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ತಡರಾತ್ರಿ ಸುಮಾರು 1:30ಕ್ಕೆ ಕೇಂದ್ರದ ವಾಸದ ಕೊಠಡಿ ಸಂಖ್ಯೆ 3ರಲ್ಲಿದ್ದವರ ಪೈಕಿ 7 ಮಂದಿ ಕಿಟಕಿಯ ಕಂಬಿ ಮುರಿದು ಪರಾರಿಯಾಗಿದ್ದಾರೆ.

5.2 ಅಡಿ ಎತ್ತರದ, ಗುಂಡುಮುಖದ, ಕನ್ನಡ ಮಾತನಾಡಬಲ್ಲ ದೇವರಾಜು (37), 5 ಅಡಿ ಎತ್ತರದ, ದುಂಡು ಮುಖದ, ಹಿಂದಿ ಮಾತನಾಡಬಲ್ಲ ದುರ್ಗಾಬಾಯಿ (56), 5.4 ಅಡಿ ಎತ್ತರದ, ಉದ್ದ ಮುಖದ, ಕನ್ನಡ ಭಾಷೆ ಮಾತನಾಡಬಲ್ಲ ಮಹಾಂತೇಶ್ (37), 5.6 ಅಡಿ ಎತ್ತರದ, ಗುಂಡುಮುಖದ, ಮಲಯಾಳಂ ಮಾತನಾಡಬಲ್ಲ ಬಿನು ಟಿ.ಜೆ. (42), 5.6 ಅಡಿ ಎತ್ತರದ, ಉದ್ದಮುಖದ, ಕನ್ನಡ ಮಾತನಾಡಬಲ್ಲ ಶರಣಪ್ಪಹಾಲಪ್ಪಹೊಸಮನಿ (37), 5.5 ಅಡಿ ಎತ್ತರದ, ಗುಂಡುಮುಖದ, ಕನ್ನಡ ಮಾತನಾಡಬಲ್ಲ ಹೀರೇಮಲ್ಲೇನಗೇರಿ ಗುರುರಾಜ್ (38), 5.7 ಅಡಿ ಎತ್ತರದ, ಕೋಲುಮುಖದ, ಕನ್ನಡ ಮಾತನಾಡಬಲ್ಲ ಪ್ರಭು (37) ಕಾಣೆಯಾಗಿರುವುದಾಗಿ ದೂರು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News