×
Ad

ಮದ್ದಡ್ಕ: ಡಿ. 21ರಂದು ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ

Update: 2025-12-19 19:24 IST

ಬೆಳ್ತಂಗಡಿ:  ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎಂಬ ಸಂಘಟನೆಯನ್ನು 1926ರಲ್ಲಿ ಆರಂಭಿಸಿದರು. ಈ ಸಂಘಟನೆಯು ಇದೀಗ ನೂರನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಕಾಸರಗೋಡಿನ ಕುಣಿಯ ಎಂಬಲ್ಲಿ 2026 ಫೆಬ್ರವರಿ 2 ರಿಂದ 8ರವರೆಗೆ 100 ನೇ ವಾರ್ಷಿಕ ಮಹಾ ಸಮ್ಮೇಳನವು ನಡೆಯಲಿಕ್ಕಿದೆ. ಅದರ ಪ್ರಚಾರಾರ್ಥ ಬೆಳ್ತಂಗಡಿ ತಾಲೂಕು ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕದಲ್ಲಿ ಡಿ. 21 ರಂದು ಸಂಜೆ 4 ಗಂಟೆಗೆ ಬೃಹತ್ ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ವೈಸ್ ಚೆಯರ್ಮೇನ್ ನಝೀರ್ ಅಝ್ಹರಿ ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಕಾರ್ಯಕ್ರಮದ ಮೊದಲಿಗೆ ಕಿನ್ನಿಗೋಳಿಯಿಂದ ಸಂಜೆ 3 ಗಂಟೆಗೆ ರ್ಯಾಲಿ ಆರಂಭಗೊಳ್ಳಲಿದೆ. ತ್ವಾಹ ತಂಙಳ್ ಬೆಳ್ತಂಗಡಿಯವರಿಂದ ಪಣಕಜೆ ಮಕಾಂ ಝಿಯಾರತ್ ಮೂಲಕ ಆರಂಭಗೊಳ್ಳಲಿದೆ, ಮಧ್ಯಾಹ್ನ 2 ಗಂಟೆಗೆ‌‌ ಎಸ್ ಕೆ ಎಸ್.ಬಿ ವಿ ಬೆಳ್ತಂಗಡಿ ರೇಂಜ್ ತಹ್ದೀಸ್ ಮೀಟ್ ವಿಧ್ಯಾರ್ಥಿ ಸಂಗಮದಲ್ಲಿ ಮಜೀದ್ ದಾರಿಮಿಯವರು ತರಗತಿ ನಡೆಸಲಿದ್ದಾರೆ. ನಂತರ SKSSF ಬೆಳ್ತಂಗಡಿ ವಲಯ ವಿಖಾಯ ಸಂಗಮ ನಡೆಯಲಿದೆ. ಕಿನ್ನಿಗೋಳಿಯಿಂದ ನಡೆಯುವ ಪ್ರಚಾರ ಜಾಥಾಕ್ಕೆ ಮುಂಡೂರು ತಂಙಳ್ ಚಾಲನೆಯನ್ನು ನೀಡಲಿದ್ದಾರೆ. ಮಿತ್ತಬೈಲ್ ಇರ್ಷಾದ್ ದಾರಿಮಿ ರ್ಯಾಲಿ ಉದ್ಘಾಟನೆಯನ್ನು ಮಾಡಲಿದ್ದಾರೆ. ಸದಖತುಲ್ಲಾ ದಾರಿಮಿ, ಶಂಸುದ್ದೀನ್ ದಾರಿಮಿ, ನೌಶಾದ್ ಅಝ್ಹರಿ, ಅಝೀಝ್ ಅಶ್ಶಾಫಿ, ಬಶೀರ್ ದಾರಿಮಿ, ಇಸ್ಮಾಯಿಲ್ ತಂಙಳ್, ನೌಶಾದ್ ಮದ್ದಡ್ಕ, ಝುಬೈರ್ ಕಕ್ಕಿಂಜೆ ರ್ಯಾಲಿಯ ನೇತೃತ್ವ ವಹಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯ ಅಧ್ಯಕ್ಷರಾದ ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಆದಂ ದಾರಿಮಿ ದುಆ ನೆರವೇರಿಸುವ ಈ ಕಾರ್ಯಕ್ರಮದಲ್ಲಿ ಮದ್ದಡ್ಕ ಸ್ವಾಗತ ಸಮೀತಿ ಚೆಯರ್ಮೇನ್ ಸಿರಾಜ್ ಚಿಲಿಂಬಿ ಸ್ವಾಗತ ಭಾಷಣ ಮಾಡಲಿದ್ದು ಬೆಳ್ತಂಗಡಿ ರೇಂಜ್ ಅಧ್ಯಕ್ಷರಾದ ಅಶ್ರಫ್ ಫೈಝಿ ಪುಂಜಾಲಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಮಸ್ತ ಕರ್ನಾಟಕ ಕೋಶಾಧಿಕಾರಿಯಾದ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೋಡಾರ್ ಉಸ್ತಾದ್ ಅನುಗ್ರಹ ಭಾಷಣವನ್ನು ನಡೆಸಲಿದ್ದು ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿಯವರಾದ ಅನೀಸ್ ಕೌಸರಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ನಝೀರ್ ಅಝ್ಹರಿ ಮತ್ತು ಶಂಸುದ್ದೀನ್ ಅಶ್ರಫೀ ಆಶಂಸಾ ಭಾಷಣ ನಡೆಸುವರು.

ಮಗ್ರಿಬ್ ನಮಾಝಿನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಚೆಯರ್ಮಾನ್ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ವೀನರ್ ಇಸ್ಮಾಯಿಲ್ ದಾರಿಮಿ ಸ್ವಾಗತ ಭಾಷಣ ಮಾಡಲಿದ್ದಾರೆ. ಸಂಚಾಲಕರಾದ ರಿಯಾಝ್ ಫೈಝಿ ಕಕ್ಕಿಂಜೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು ಜಲಾಲಿ ಉಸ್ತಾದ್ ಕಕ್ಕಿಂಜೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.. ಅಶ್ಫಾಕ್ ಫೈಝಿ ಬ್ಯಾರಿ ಭಾಷಣ ಮಾಡಲಿದ್ದಾರೆ. ಅಝೀಝ್ ದಾರಿಮಿ ಚೊಕ್ಕಬೆಟ್ಟು,ಹೈದರ್ ದಾರಿಮಿ ಕರಾಯ,ಇಸ್ಮಾಯಿಲ್ ಫೈಝಿ ,ಜುನೈದ್ ಜಿಫ್ರಿ ತಂಙಳ್ ಆಶಂಸ ಭಾಷಣವನ್ನು ಮಾಡಲಿದ್ದಾರೆ.ಪ್ರಖ್ಯಾತ ಸುನ್ನತ್ ಜಮಾಅತಿನ ವಾಗ್ಮಿ ಜಝೀಲ್ ಕಮಾಲಿ ಫೈಝಿ ಉಸ್ತಾದ್ ಮುಖ್ಯ ಪ್ರಭಾಷಣಗೈಯಲಿದ್ದಾರೆ. ವಲಯ ಕಾರ್ಯದರ್ಶಿ ಹಾಶಿಂ ಫೈಝಿ ಧನ್ಯವಾದ ನಡೆಸುವರು.

ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ಗಣ್ಯರು ಭಾಗವಹಿಸಲಿದ್ದಾರೆ‌ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಮೂಸಾ ದಾರಿಮಿ ಕಕ್ಕಿಂಜೆ ಸ್ವಾಗತ ಸಮಿತಿ ಕನ್ವೀನರ್ ರಿಯಾಝ್ ಫೈಝಿ, ರೇಂಜ್ ಅಧ್ಯಕ್ಷರಾದ ಅಶ್ರಫ್ ಫೈಝಿ, ವೈಸ್ ಚೆಯರ್ಮೇನ್ ನಝೀರ್ ಅಝ್ಹರಿ, ಬೆಳ್ತಂಗಡಿ ವಲಯ ಅಧ್ಯಕ್ಷರಾದ ರಝಾಕ್ ಮದ್ದಡ್ಕ ಸಮಿತಿ ಅಧ್ಯಕ್ಷರಾದ ಇಲ್ಯಾಸ್ ಚಿಲಿಂಬಿ, ಅಝೀಝ್ ಅಶ್ಶಾಫಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News