ಸುಸ್ಥಿರ ಸಾರಿಗೆಗೆ ಉತ್ತೇಜನ| ನಿಟ್ಟೆ ವಿವಿಯಿಂದ ವಿದ್ಯುತ್ ಚಾಲಿತ ವಾಹನಗಳ ರ‍್ಯಾಲಿ
ಮಂಗಳೂರು, ಡಿ.17: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬುಧವಾರ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಸಭಾಂಗಣದ ಆವರಣದಲ್ಲಿ ಸಿಬ್ಬಂದಿಯ ವಿದ್ಯುತ್ ಚಾಲಿತ ವಾಹನಗಳ ರ‍್ಯಾಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಭಾಗವಹಿಸಿ, ರ‍್ಯಾಲಿಗೆ ಚಾಲನೆ ನೀಡಿದರು.
ರ‍್ಯಾಲಿಯು ದೇಳಕಟ್ಟೆ ವೃತ್ತದ ಮೂಲಕ ಪನೀರ್‌ನ ವಿವಿ ಕ್ಯಾಂಪಸ್‌ನಲ್ಲಿ ಮುಕ್ತಾಯಗೊಂಡಿತು.
ನಿಟ್ಟೆ ವಿವಿಯ ಉಪ ಕುಲಸಚಿವೆ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಕೋಶದ ಮುಖ್ಯ ಸಂಯೋಜಕಿ ಡಾ. ಸುಮಾ ಬಳ್ಳಾಲ್ ಜಾಗತಿಕ ಸುಸ್ಥಿರತೆಯ ಗುರಿಗಳನ್ನು ಸಾಧಿಸುವಲ್ಲಿ ನಿಟ್ಟೆ ವಿವಿಯ ಪಾತ್ರದ ಬಗ್ಗೆ ವಿವರಿಸಿದರು.
ಡಾ. ಕೃಷ್ಣ ಶರಣ್ ವಾಗತಿಸಿದರು. ಸುಸ್ಥಿರ ಅಭಿವೃದ್ಧಿ ಗುರಿ ಕೋಶದ ಸದಸ್ಯ ಕಾರ್ಯದರ್ಶಿ ಡಾ. ವಿನಾಯಕ ಬಿ. ಶೇಟ್, ಎನ್‌ಎಸ್‌ಎಸ್ ಸಂಯೋಜಕ ಶಶಿಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.