×
Ad

ಪುಚ್ಚಮೊಗರು ʼಗಣಪತಿಕಟ್ಟೆಯಲ್ಲಿ ಹಸಿರು ಧ್ವಜʼ ಮಾಧ್ಯಮಗಳ ವರದಿ ಸುಳ್ಳು: ಅನ್ವರ್ ಸಾದಿಕ್

Update: 2023-10-07 22:24 IST

ಮೂಡುಬಿದಿರೆ, ಅ.7: ಪುಚ್ಚಮೊಗರಿನಲ್ಲಿ ಇತ್ತೀಚೆಗೆ ನಡೆದ ಹಸಿರು ಧ್ವಜ ತೆರವುಗೊಳಿಸಲಾದ ಘಟನೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದಂತೆ ಯಾವುದೂ ನಡೆದಿಲ್ಲ ಮತ್ತು ಆ ಕಟ್ಟೆ ಸರಕಾರಿ ಜಾಗದಲ್ಲಿರುವ ಮಾವಿನಕಟ್ಟೆಯೇ ಹೊರತು ಗಣಪತಿ ಕಟ್ಟೆ ಅಲ್ಲ ಎಂದು ಪುಚ್ಚಮೊಗರು ಮಸೀದಿ ಕಮಿಟಿ ಸದಸ್ಯ ಅನ್ವರ್ ಸಾದಿಕ್ ಅವರು ಸ್ಪಷ್ಟಪಡಿಸಿದ್ದಾರೆ.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ನಡೆದ ಮೀಲಾದುನ್ನಬಿ ಪ್ರಯುಕ್ತ ಮಾವಿನಕಟ್ಟೆಯಲ್ಲಿ ಹಾಕಲಾಗಿದ್ದ ಹಸಿರು ಧ್ವಜವನ್ನು ಮೂಡುಬಿದಿರೆ ಇನ್‌ಸ್ಪೆಕ್ಟರ್ ಸಂದೇಶ್ ಅವರು ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿಸಿದ್ದಾರೆ. ಆದರೆ ಕೆಲವೊಂದು ದೃಶ್ಯ ಮಾಧ್ಯಮಗಳು ತಮ್ಮ ಮನಸ್ಸಿಗೆ ಬಂದಂತೆ ಪ್ರಕಟಿಸಿ ಕೋಮು ಪ್ರಚೋದನೆ ನೀಡಿದೆ. ವಾಸ್ತವ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕಾದ ಮಾಧ್ಯಮಗಳು ಈ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಕಟಿಸಿರುವುದು ತುಂಬಾ ನೋವಾಗಿದೆ ಎಂದು ಹೇಳಿದರು.

ಇಲ್ಲಿನ ಕಟ್ಟೆ ಮತ್ತು ಸೌಹಾರ್ದತೆ ಬಗ್ಗೆ ಇಲ್ಲಿನ ಎರಡೂ ಧರ್ಮಗಳ ಹಿರಿಯರಿಗೆ ಚೆನ್ನಾಗಿ ಗೊತ್ತಿದೆ. ಮಾವಿನಕಟ್ಟೆಗೆ ಗಣಪತಿ ಕಟ್ಟೆ ಎಂದು ನಾಮಕರಣ ಮಾಡಿರುವುದು ಮಾಧ್ಯಮಗಳೇ ಹೊರತು ಇಲ್ಲಿನವರ್ಯಾರೂ ಅಲ್ಲ, ನಮ್ಮೂರ ಸೌಹಾರ್ದತೆ ಮುಂದುವರಿಯುತ್ತದೆ. ಆದರೆ ನಮ್ಮ ಮಾವಿನಕಟ್ಟೆ ಮಾವಿನ ಕಟ್ಟೆಯಾಗಿಯೇ ಮುಂದುವರಿಯ ಬೇಕೆಂದವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಮಾತ್‌ ಸಮಿತಿ ಜೊತೆ ಕಾರ್ಯದರ್ಶಿ ಖಾದರ್ ಜಲೀಲ್, ಸದಸ್ಯರಾದ ಮುಹಮ್ಮದ್ ಅಝರ್, ಮುಹಮ್ಮದ್ ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News