×
Ad

ಮಂಗಳೂರಿನಲ್ಲಿ ರಾಂಬೋ ಸರ್ಕಸ್ ಆರಂಭ

Update: 2023-09-21 23:01 IST

ಮಂಗಳೂರು, ಸೆ.21: ರಾಂಬೋ ಸರ್ಕಸ್ ಗುರುವಾರ ನಗರದ ಡಾ.ಟಿ.ಎಂ.ಎ. ಪೈ ಸೆಂಟರ್‌ನಲ್ಲಿ ಆರಂಭಗೊಂಡಿದೆ.

ಹವಾನಿಯಂತ್ರಿತ ಆಡಿಟೋರಿಯಮ್‌ನಲ್ಲಿ ಮೊದಲ ಬಾರಿಗೆ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು, ಸೆ.24ರ ತನಕ ರಾಂಬೋ ಸರ್ಕಸ್‌ನ ಬೆರಗುಗೊಳಿಸುವ ಪ್ರದರ್ಶನ ಇರಲಿದೆ.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಸರ್ಕಸ್‌ಗೆ ಚಾಲನೆ ನೀಡಿದರು. ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಕಾರ್ಪೊರೇಟರ್ ಶಶಿಕಲಾ ಕಾವ , ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಂಬೋ ಸರ್ಕಸ್ ಮೊದಲ ದಿನ 2 ಪ್ರದರ್ಶನ , ಸೆ.22ರಂದು 3, ಸೆ. 23 ಮತ್ತು 24ರಂದು 4 ಪ್ರದರ್ಶಗಳಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News