×
Ad

ಜು.30: ‘ನಲ್ಮೆಯ ಹರೇಕಳ ಗ್ರಾಮ’ ಕೃತಿ ಬಿಡುಗಡೆ

Update: 2023-07-29 18:50 IST

ಸಾಂದರ್ಭಿಕ ಚಿತ್ರ

ಮಂಗಳೂರು, ಜು.29: ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಇತಿಹಾಸ, ವಿಶೇಷತೆ, ವೈಭವ, ಸಾಧಕರ ವ್ಯಕ್ತಿ ಪರಿಚಯವನ್ನು ಒಳಗೊಂಡ ‘ನಲ್ಮೆಯ ಹರೇಕಳ ಗ್ರಾಮ’ ಕೃತಿಯು ಜು.30ರ ಸಂಜೆ 4ಕ್ಕೆ ಹರೇಕಳ ಗ್ರಾಮ ಸೌಧದಲ್ಲಿ ಬಿಡುಗಡೆಗೊಳ್ಳಲಿದೆ.

ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೈನೋದ್ಯಮಿ ಮೈಮುನಾ ರಾಜ್‌ಕಮಲ್ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್. ನಾಯಕ್, ದ.ಕ.ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ. ಪ್ರವೀಣ್ ರಾಜ್, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಹರೇಕಳ ಪ್ರಕಾಶನದ ಸಲಹೆಗಾರರಾದ ಎಡ್ವರ್ಡ್ ಡಿಸೋಜ ಮತ್ತು ಮುಸ್ತಫಾ ಮಲಾರ್, ಕೃತಿಯ ಸಂಪಾದಕರಾದ ಹಂಝ ಮಲಾರ್ ಮತ್ತು ಅನ್ಸಾರ್ ಇನೋಳಿ ಭಾಗವಹಿಸಲಿದ್ದಾರೆ ಎಂದು ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News