×
Ad

ಬಿಷಪ್‌ಹೌಸ್‌ನ ಶೋಕಮಾತೆ ಪ್ರಾಥನಾ ಮಂದಿರ ನವೀಕರಣ

Update: 2025-05-31 18:20 IST

ಮಂಗಳೂರು: ಕೊಡಿಯಾಲ್‌ಬೈಲ್‌ನ ಬಿಷಪ್‌ಹೌಸ್‌ನಲ್ಲಿ ಹೊಸದಾಗಿ ನವೀಕರಿಸಲಾದ ‘ಅವರ್ ಲೇಡಿ ಆಫ್ ಸೋರೋವ್ಸ್’ (ಶೋಕಮಾತೆ) ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಮಂಗಳೂರು ಬಿಷಪ್ ಅತೀ ವಂ. ಡಾ. ಪೀಟರ್ ಪೌಲ್ ಸಲ್ಡಾನಾ ಆಶೀರ್ವಚನದೊಂದಿಗೆ ಬಲಿಪೂಜೆ ನೆರವೇರಿಸಿದರು.

ಐತಿಹಾಸಿಕ ಹಾಗೂ ಆಧ್ಯಾತ್ಮಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಶೋಕಮಾತೆಯ ಪ್ರಾರ್ಥನಾ ಮಂದಿರವನ್ನು ೧೮೫೭ರಲ್ಲಿ ಸ್ಥಾಪಿಸಲಾಗಿತ್ತು. ೧೯೬೩ರಲ್ಲಿ ಮುಂಭಾಗದ ನವೀಕರಣ ನಡೆದಿದ್ದು, ದಶಕದ ಹಿಂದೆ ನೆಲಹಾಸಿನ ಬದಲಾವಣೆ ಮಾಡಲಾಗಿತ್ತು. ಇದೀಗ ಹೊಸ ವಾಸ್ತುಶಿಲ್ಪದೊಂದಿಗೆ ಹೊಸ ಮುಂಭಾಗ, ಛಾವಣಿ, ಗೋಡೆಗಳ ಪ್ಲಾಸ್ಟರಿಂಗ್, ಹೊಸ ಚಿತ್ರಕಲೆ, ವಿದ್ಯುದೀಕರಣ, ಧ್ವನಿ ವ್ಯವಸ್ಥೆ ಸೇರಿ ಅಗತ್ಯ ನವೀಕರಣ ಮಾಡಲಾಗಿದೆ.

ಅತೀ ವಂ. ಮ್ಯಾಕ್ಸಿಂ ಎಲ್. ನೊರೊನ್ನಾ, ವಿಕಾರ್ ಜನರಲ್ ವಂ. ಡಾ. ವಿಕ್ಟರ್ ಜಾರ್ಜ್ ಡಿಸೋಜಾ, ರೆ.ಫಾ. ಜಗದೀಶ್ ಪಿಂಟೋ, ರೆ.ಫಾ. ರೂಪೇಶ್ ಮಾಡ್ತಾ, ವಂ. ಮ್ಯಾಕ್ಸಿಂ ರೊಸಾರಿಯೊ, ವಂ. ತ್ರಿಶನ್ ಡಿಸೋಜಾ, ವಂ. ಜೇಸನ್ ಲೋಬೋ, ವಂ. ವಲೇರಿಯನ್ ಡಿಸೋಜಾ, ಲೆಸ್ಲಿ ಎಪ್. ಶೆಣೈ ಸೇರಿದಂತೆ ಇತರ ಧಾರ್ಮಿಕ ಗಣ್ಯರು, ಭಗಿನಿಯರು ಉಪಸ್ಥಿತರಿದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News