ಮಾದಕ ವ್ಯಸನಗಳಿಗೆ ಬಲಿಯಾಗದಿರಲು ಸ್ವ ನಿಯಂತ್ರಣ ಅಗತ್ಯ: ಎಸಿಪಿ ಗೀತಾ ಕುಲಕರ್ಣಿ
ಮಂಗಳೂರು: ಮಾದಕ ವ್ಯಸನಗಳಿಗೆ ದಾಸರಾಗದೆ ಇರಬೇಕಾದರೆ ಸ್ವಯಂ ನಿಯಂತ್ರಣ ಅಗತ್ಯ ಎಂದು ಮಂಗಳೂರು ಪೊಲೀಸ್ ಆಯುಕ್ತಾಲಯದ ಎಸಿಪಿ ಗೀತಾ ಕುಲಕರ್ಣಿ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಬಲ್ಮಠ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ವತಿಯಿಂದ ಮಂಗಳವಾರ ಕಾಲೇಜಿನ ವಿವಿಧ ಘಟಕದ ಸಹಯೋಗ ದೊಂದಿಗೆ ಹಮ್ಮಿಕೊಂಡ ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿ ಗಳು ಕಲಿಕೆಯ ಸಂದರ್ಭದಲ್ಲಿ ಆಮಿಷಗಳಿಗೆ ಬಲಿಯಾ ಗದೆ.ತಮ್ಮ ಗುರಿ ಯಿಂದ ವಿಚಲಿತರಾಗದೆ ಸ್ವಯಂ ಶಿಸ್ತಿನ ಪಾಲನೆಯಿಂದ ಮಾದಕ ವ್ಯಸನಗಳಿಂದ ದೂರ ಇರುವಂತೆ ಮಾಡುತ್ತದೆ ಎಂದರು.
ಕೆಎಂಸಿಯ ಪೊರೆನ್ಸಿಕ್ ತಜ್ಞರಾದ ಡಾ.ಮಹಾಬಲೇಶ್ ಶೆಟ್ಟಿ ಮಾತ ನಾಡುತ್ತಾ,ಮಾದಕ ವ್ಯಸನ ನಮ್ಮದೇಹದ ವಿವಿಧ ಅಂಗಗಳ ಮೇಲೆ ಯಾವ ರೀತಿ ಹಾನಿಯುಂಟು ಮಾಡುತ್ತದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಬಾಳ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ಜಯ ಶ್ರೀ ,ಉಪನ್ಯಾಸಕಿ ಡಾ. ಮಂಜುಳಾ ಮಲ್ಯ,ರೋಟರಿ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಕೋಶಾಧಿಕಾರಿ ರಾಜೇಶ್ ಸೀತಾರಾಂ, ಮಾಜಿ ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜ್ ಗೋಪಾಲ್ ರೈ, ನಿಕಟ ಪೂರ್ವ ಅಧ್ಯಕ್ಷ ಬ್ರಿಯಾನ್ ಪಿಂಟೊ, ಯೂಥ್ ಸರ್ವಿಸ್ ನಿರ್ದೇಶಕ ಜಾಕ್ಸನ್ ಸಲ್ದಾನ,ಪ್ರದೀಪ್ ಕುಲಾಲ್, ಪುಷ್ಪ ರಾಜ್ ಬಿ ಎನ್, ಗೀತಾ ಬಿ ರೈ , ನಾಗೇಂದ್ರ , ಹೃದಯ ಪೈ ,ಶೆಲ್ಡನ್ ಕ್ರಾಸ್ತಾ ಮೊದಲಾ ದವರು ಉಪಸ್ಥಿತರಿದ್ದರು.