×
Ad

ಶಾಂತಿಅಂಗಡಿ: ನುಸ್ರತ್ ಮಿಲಾದುನ್ನಬಿ ಸಂಘದ 32ನೇ ವಾರ್ಷಿಕ ಮಹಾ ಸಭೆ | ಅಧ್ಯಕ್ಷರಾಗಿ ಇಸ್ಮಾಯಿಲ್ ಪಲ್ಲ ಆಯ್ಕೆ

Update: 2024-11-06 12:01 IST

ಬಂಟ್ವಾಳ : ನುಸ್ರತ್ ಮಿಲಾದುನ್ನಬಿ ಸಂಘ ಶಾಂತಿಅಂಗಡಿ ಇದರ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಪಲ್ಲ ಆಯ್ಕೆಯಾದರು.

ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಕೆ.ಎಂ. ಅಬ್ಬಾಸ್ ಫೈಝಿ ಇವರ ಅಧ್ಯಕ್ಷತೆ ಯಲ್ಲಿ ನಡೆದ ಸಂಘದ 32ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಮುಹಮ್ಮದ್ ಮಜಲ್, ಉಪಾಧ್ಯಕ್ಷರುಗಳಾಗಿ ಸಮದ್ ಕೈಕಂಬ, ಸಾದಿಖ್ ತಾಳಿಪಡ್ಪು, ಪಧಾನ ಕಾರ್ಯದರ್ಶಿಯಾಗಿ ಅಶ್ರಫ್ ಎಸ್. ಶಾಂತಿಅಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಆದಂ ಎಸ್.ಕೆ, ಶಾಹುಲ್ ಅದ್ದೇಡಿ, ಲೆಕ್ಕ ಪರಿಶೋಧಕರಾಗಿ ಆದಂ ಪಲ್ಲ, ಕೋಶಾಧಿಕಾರಿಯಾಗಿ ಹನೀಫ್ ಪಿತ್ತ್‌ಲ್ ಶಾಂತಿ ಅಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಹಮದ್ ಬಾವ ನಂದರ ಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು.

ಅಶ್ರಫ್ ಎಸ್ ಸ್ವಾಗತಿಸಿ, ಇಸ್ಮಾಯಿಲ್ ಶಾಂತಿ ಅಂಗಡಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News