×
Ad

ರಾಜ್ಯಮಟ್ಟದ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಮುನಾಫ್ ರಹ್ಮಾನ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ, ಸೀನಿಯರ್ ವಿಭಾಗದಲ್ಲಿ ತೃತೀಯ

Update: 2024-08-20 19:08 IST

ಮಂಗಳೂರು,ಆ.20: ಕರ್ನಾಟಕ ರಾಜ್ಯ ವೈಟ್‌ಲಿಫ್ಟರ್ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ವೈಟ್‌ಲಿಫ್ಟರ್ ಸಂಸ್ಥೆ, ದೈಹಿಕ ಶಿಕ್ಷಕರ ಅಕಾಡಮಿಯ ವತಿಯಿಂದ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಬಾಲಕರ ಕರ್ನಾಟಕ ರಾಜ್ಯ ವೈಟ್‌ಲಿಪ್ಟಿಂಗ್ ಚಾಂಪಿಯನ್‌ ಶಿಪ್ 2024-25ರಲ್ಲಿ ಮುನಾಫ್ ರಹ್ಮಾನ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಹಾಗೂ ಸೀನಿಯರ್ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜೂನಿಯರ್ 61 ಕೆ.ಜಿ.ವಿಭಾಗದಲ್ಲಿ ಮುನಾಫ್ ರಹ್ಮಾನ್ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿಯಾಗಿರುವ ಮುನಾಫ್ ರಹ್ಮಾನ್, ಉಸ್ಮಾನ್ ಪೆರ್ನೆ ಹಾಗೂ ಆಯಿಷಾ ದಂಪತಿಯ ಮಗನಾಗಿದ್ದು, ಸಂತ ಫಿಲೋಮಿನ ಕಾಲೇಜಿನ ತರಬೇತುದಾರ ಎಲಿಯಾಸ್ ಪಿಂಟೋ ಹಾಗೂ ಅಶ್ವಥ್‌ರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News