ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್: ಮುಹಮ್ಮದ್ ಶಾಮೀಲ್ ಅರ್ಷದ್‌ಗೆ ಚಿನ್ನದ ಪದಕ
Update: 2023-10-03 21:56 IST
ಮಂಗಳೂರು, ಅ.3: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ (ರಿ) ಮೈಸೂರಿನ ರಾವ್ಸ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ಇತ್ತೀಚೆಗೆ ಆಯೋಜಿಸಿದ 4ನೇ ರಾಜ್ಯಮಟ್ಟದ ರ್ಯಾಂಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 14-17 ವರ್ಷದ ಬಾಲಕರ ಇನ್‌ಲೈನ್ ವಿಭಾಗದಲ್ಲಿ 4 ಚಿನ್ನದ ಪದಕ ಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
500+ಈ ರಿಂಕ್ ರೇಸ್‌ನಲ್ಲಿ ಚಿನ್ನದ ಪದಕ, 200 ಮೀಟರ್ ಡ್ಯುಯಲ್ ಟಿಟಿ ನಲ್ಲಿ ಚಿನ್ನದ ಪದಕ, ಒನ್ ಲ್ಯಾಪ್ ರೋಡ್ ರೇಸ್‌ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್‌ರೇಸ್‌ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.
ಯೆನೆಪೋಯ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಈತ ಹೈ ಫೈರ್ಯಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯರಾ ಗಿದ್ದು, ಮೋಹನ್ ದಾಸ್‌ರಿಂದ ತರಬೇತಿ ಪಡೆಯುತ್ತಿದ್ದಾರೆ. ನಗರದ ಅರ್ಷದ್ ಹುಸೇನ್ ಮತ್ತು ರಮ್ಲತ್ ಅರ್ಷದ್ ದಂಪತಿಯ ಪುತ್ರನಾಗಿದ್ದಾರೆ.