×
Ad

ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ರೈಫಾನ್ ತೃತೀಯ

Update: 2024-08-19 20:36 IST

ಮಂಗಳೂರು, ಆ.19:ಮೈಸೂರಿನಲ್ಲಿ ನಡೆದ ಬಾಲಕರ ಕರ್ನಾಟಕ ರಾಜ್ಯ ವೈಟ್ಲಿಪ್ಟಿಂಗ್ ಚಾಂಪಿಯನ್‌ಶಿಪ್ 2024-25ರಲ್ಲಿ ರೈಫಾನ್ ಅಹಮದ್ 3ನೇ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ವೇಟ್ ಲಿಫ್ಟಿಂಗ್ ಸಂಸ್ಥೆ, ದೈಹಿಕ ಶಿಕ್ಷಕರ ಅಕಾಡೆಮಿ ವತಿಯಿಂದ ಮೈಸೂರಿನ ಮಹಾಜನ ಡಿಗ್ರಿ ಕಾಲೇಜು ಕ್ರೀಡಾಂಗಣದಲ್ಲಿ ಆ.17 ಮತ್ತು 18ರಂದು ನಡೆದ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನ ಜೂನಿಯರ್ 61 ಕೆ.ಜಿ. ವಿಭಾಗದಲ್ಲಿ ರೈಫಾನ್ ಅಹಮದ್ ಅವರು ತೃತೀಯ ಸ್ಥಾನ ಪಡೆದರು.

ಮಂಗಳೂರು ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವಿದ್ಯಾರ್ಥಿಯಾಗಿರುವ ರೈಫಾನ್ ಅಹಮದ್ ಅವರು ಬಿ.ಸಿ. ರೋಡ್ ಶಾಂತಿಅಂಗಡಿ ನಿವಾಸಿ ರಫೀಕ್ - ಝೊಹರಾ ದಂಪತಿ ಪುತ್ರ.

ಮಂಗಳೂರಿನ ಮಂಗಳಾ ಥ್ರೋವರ್ಸ್ ಅಕಾಡೆಮಿಯಲ್ಲಿ ಪುಷ್ಪರಾಜ್ ಹೆಗ್ಡೆ ಮತ್ತು ಸುದರ್ಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News