ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಮ್: ವಜ್ರ ಮತ್ತು ಪೋಲ್ಕಿ ವಜ್ರಾಭರಣಗಳ ಬ್ರಾಂಡ್ ‘ಕಿಯೋಮಿ’ ಅನಾವರಣ
ಮಂಗಳೂರು: ನಗರದ ಕಂಕನಾಡಿ ಮುಖ್ಯರಸ್ತೆಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ಐಷಾರಾಮಿ ವಜ್ರ ಮತ್ತು ಪೋಲ್ಕಿ ವಜ್ರಾಭರಣಗಳ ಬ್ರಾಂಡ್ ‘ಕಿಯೋಮಿ’ಯನ್ನು ಬುಧವಾರ ಅನಾವರಣಗೊಳಿಸಲಾಯಿತು.
ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಲಕ್ಸುರಿ ‘ಕಿಯೋಮಿ’ ಬೌಟಿಕ್ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರಿನ ಗ್ರಾಹಕರಿಗೆ ಹೊಸ ವಿನ್ಯಾಸದ ‘ಕಿಯೋಮಿ’ ಬ್ರಾಂಡ್ ವಿನೂತನ ಅನುಭವ ನೀಡಲಿವೆ. ಕುಟುಂವದ ಎಲ್ಲಾ ಸದಸ್ಯೆಯರ ಸಹಿತ ಎಲ್ಲ ವರ್ಗದ ಮಹಿಳೆಯರ ಹಿತಕ್ಕೆ ಅನುಗುಣವಾಗಿ, ಮನಕ್ಕೆ ಒಪ್ಪುವ ಕಲಾತ್ಮಕ ವಿನ್ಯಾಸದ ಆಭರಣಗಳ ಸಂಗ್ರಹವು ಇಲ್ಲಿದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಲ್ತಾನ್ ಗ್ರೂಪ್‌ನ ಮ್ಯಾನೇಜಿಂಗ್ ಡೈರಕ್ಟರ್ ಡಾ. ಅಬ್ದುಲ್ ರವೂಫ್, ಎಕ್ಸಿಕ್ಯೂಟಿವ್ ಡೈರಕ್ಟರ್ ಟಿ.ಎಂ. ಅಬ್ದುಲ್ ರಹೀಮ್, ಜನರಲ್ ಮ್ಯಾನೇಜರ್ ಎ.ಕೆ.ಉನ್ನಿತ್ತಾನ್, ರೀಜನಲ್ ಮ್ಯಾನೇಜರ್ ಸುಮೇಶ್, ಬ್ರಾಂಚ್ ಮ್ಯಾನೇಜರ್ ಅಬ್ದುಲ್ ಸತ್ತಾರ್ ಅರಂಗಲ, ಸೀನಿಯರ್ ಮ್ಯಾನೇಜರ್ ಕೆ.ಎಸ್. ಮುಸ್ತಫಾ ಕಕ್ಕಿಂಜೆ, ಸೇಲ್ಸ್ ಡಿವಿಜನ್ ಮ್ಯಾನೇಜರ್‌ಗಳಾದ ಫೈಝಲ್, ಸನೂಪ್, ಮಾರ್ಕೆಟಿಂಗ್ ಮ್ಯಾನೇಜರ್ ಇಫ್ತಿಕಾರ್, ಕಾರ್ಪೊರೇಟ್ ಮ್ಯಾನೇಜರ್ ಲಿಕ್ಸನ್ ಡೇವಿಸ್ ಉಪಸ್ಥಿತರಿದ್ದರು.
‘ಕಿಯೋಮಿ’ಯು ಜಪಾನಿ ಭಾಷೆಯ ಶುದ್ಧ ಮತ್ತು ಸುಂದರ ಎಂಬ ಅರ್ಥ ನೀಡುತ್ತದೆ. ಇದು ಸೊಗಸಾದ, ಶುದ್ಧ ಮತ್ತು ಸುಂದರ ಐಷಾರಾಮಿ ಆಭರಣಗಳಿಗೆ ಸಮಾನಾರ್ಥವಾಗಿದೆ. ಸುಲ್ತಾನ್ ಗೋಲ್ಡ್‌ನ ಮೊದಲ ಮಹಡಿಯಲ್ಲಿ ಜಾಗತಿಕ ಬ್ರಾಂಡ್‌ನ ‘ಕಿಯೋಮಿ’ ಸಂಗ್ರಹ ಆಕರ್ಷಕವಾಗಿ ಗಮನ ಸೆಳೆಯುತ್ತಿವೆ.