×
Ad

ಸುರತತ್ಕಲ್‌ : ಅಕ್ರಮ ಮರಳು ಸಾಗಾಟ ಆರೋಪ; ಲಾರಿ ವಶಕ್ಕೆ

Update: 2023-10-27 22:45 IST

ಫೈಲ್‌ ಫೋಟೊ 

ಸುರತತ್ಕಲ್‌, ಅ.27: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಟಿಪ್ಪರ್‌ ಲಾರಿಯೊಂದನ್ನು ಸುರತ್ಕಲ್‌ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ಪೊಲೀಸ್‌ ಠಾಣೆಯ ಪಿಎಸ್ಸೈ ರಾಘು ನಾಯಕ್‌ ಅವರು ಕಾನಾ-ಕೋಡಿಕೆರೆ ಮಾರ್ಗವಾಗಿ ಕಳವಾರು ಪರಿಸರದಲ್ಲಿ ಗಸ್ತಿನಲ್ಲಿದ್ದ ವೇಳೆ ಟಿಪ್ಪಲ್‌ ಲಾರಿಯೊಂದದು ಬಂದಿದ್ದು, ಅದನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಚಾಲಕ ಲಾರಿಯನ್ನು 50 ಮೀಟರ್‌ ದೂರದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ.

ಈ ವೇಳೆ ಸುಮಾರು 4 ಲಕ್ಷ ರೂ. ಮೌಲ್ಯದ ಟಿಪ್ಪರ್‌ ಲಾರಿ ಮತ್ತು ಅದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 7 ಸಾವಿರ ರೂ. ಮೌಲ್ಯದ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News