×
Ad

ಸುರಿಬೈಲ್ ಅಬ್ರಾಡ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್: ಮಹಾಸಭೆ, ಸ್ನೇಹಕೂಟ ಕಾರ್ಯಕ್ರಮ

Update: 2025-10-24 18:39 IST

ಕಲ್ಲಡ್ಕ: ಸುರಿಬೈಲ್ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಸುರಿಬೈಲ್ ಅಬ್ರಾಡ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಮಹಾಸಭೆ ಮತ್ತು ಸ್ನೇಹಕೂಟ ಕಾರ್ಯಕ್ರಮವು ಜುಬೈಲ್ ನಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷರಾದ ಶರೀಫ್ ಕುಡುಂಬಕೋಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸುರಿಬೈಲ್ ಮಸೀದಿ ಖತೀಬ್ ಮುಹಮ್ಮದ್ ಸಖಾಫಿ ಝೂಮ್ ಮೂಲಕ ದುವಾಃ ನೆರವೇರಿಸಿ ಉದ್ಘಾಟಿಸಿದರು. ಜಾಬಿರ್ ಗಂಡಿ ಕಿರಾಅತ್ ಪಠಿಸಿದರು. ಸಂಘಟನಾ ಕಾರ್ಯದರ್ಶಿ ಆದಂ ಮಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಪ್ರ. ಕಾರ್ಯದರ್ಶಿ ಅಬ್ದುಲ್ ಅಝೀಝ್ ಸುರಿಬೈಲ್ ವಾರ್ಷಿಕ ವರದಿ ವಾಚಿಸಿದರು. ಹಣಕಾಸು ಕಾರ್ಯದರ್ಶಿ ಉಬೈದ್ ಕೋಡಿಬೈಲ್ ಲೆಕ್ಕಪತ್ರ ಮಂಡಿಸಿದರು. ಪರಿಶೀಲಿಸಿದ ಸಭೆಯು ವರದಿ ಮತ್ತು ಲೆಕ್ಕಪತ್ರ ಅಂಗೀಕರಿಸಲಾಯಿತು.

ಸಮಿತಿ ಅಧ್ಯಕ್ಷರಾದ ಶರೀಫ್ ಕುಡುಂಬಕೋಡಿ ಮಾತನಾಡಿ ಟ್ರಸ್ಟ್ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಸಮಿತಿಯ ಶಿಕ್ಷಣ ಮತ್ತು ಸಾಂತ್ವನ ನಿಧಿಗೆ 1 ಲಕ್ಷ ರೂ. ಮಂಜೂರು ನೀಡಲಾಯಿತು.

ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ತೌಸೀರ್ ಅಹ್ಮದ್ ಎಸ್. ಟಿ ಮತ್ತು ಸಮಿತಿ ಸಲಹೆಗಾರರಾದ ಶಾಕಿರ್ ದೊಡ್ಡಮನೆ, ಅಝೀಝ್ ಕೆಪಿ ಬೈಲ್ ವೇದಿಕೆಯಲ್ಲಿದ್ದರು. ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಹೊಸ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಹಮೀದ್ ಹಾಜಿ ಕೋಸ್ಟಲ್, ಅಧ್ಯಕ್ಷರಾಗಿ ಶರೀಫ್ ಕುಡುಂಬಕೋಡಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮದೀನಾ, ಉಪಾಧ್ಯಕ್ಷರಾಗಿ ತೌಸೀರ್ ಅಹ್ಮದ್ ಎಸ್ ಟಿ ಇವರನ್ನು ಪುನರಾಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಉಬೈದ್ ಕೋಡಿಬೈಲ್, ಉಪಾಧ್ಯಕ್ಷರಾಗಿ ಎಸ್.ಟಿ ಉಮ್ಮರ್ ದುಬೈ, ಅಶ್ರಫ್ ಕಂಡಿಗ ದುಬೈ, ಹನೀಫ್ ಶೆಡ್ಡ್ ದುಬೈ, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಕಟ್ಟದಬಳಿ, ಶಿಹಾಬ್ ಕೋಡಿಬೈಲ್ ರಿಯಾದ್, ಸಲೀಂ ಕಂಡಿಗ ದುಬೈ, ಸಂಘಟನಾ ಕಾರ್ಯದರ್ಶಿಯಾಗಿ ಆದಂ ಮಜಾಲ್ ಮತ್ತು ಇರ್ಶಾದ್ ಮೋಂತಿಮಾರ್ ದುಬೈ, ಸಂಚಾಲಕರಾಗಿ ಅಬ್ದುಲ್ ಅಝೀಝ್ ಪವಿತ್ರ ಕೆ ಎಸ್ ಎ, ಸಾಂತ್ವನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಕಾಡಂಗಡಿ ಬಹ್ರೈನ್, ಆಂಬ್ಯುಲೆನ್ಸ್ ಉಸ್ತುವಾರಿಯಾಗಿ ಶಾಕಿರ್ ದೊಡ್ಡಮನೆ, ಲೆಕ್ಕಪರಿಶೋದಕರಾಗಿ ಕೆರೀಂ ಮಿಲನ್ ಇವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆದಂ ಬಾಲಾಜಿಬೈಲ್ ಖತಾರ್, ಬಶೀರ್ ಬಳಪು ಜಿದ್ದಾ, ಪಹದ್ ಮಜಾಲ್ ಜುಬೈಲ್, ಸತ್ತಾರ್ ಸಾಗರ್ ಜುಬೈಲ್, ಉಮರುಲ್ ಫಾರೂಕ್ ಒಮಾನ್, ಕೆರೀಂ ಕಂಡಿಗ ಒಮಾನ್, ಪರ್ಹಾನ್ ಮಜಲ್, ಜಾಫರ್ ಪಿಜೆ ಅಬುದಾಬಿ, ಇವರನ್ನು ಆಯ್ಕೆ ಮಾಡಲಾಯಿತು.

ಸುರಿಬೈಲ್ ಜಮಾಅತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಹಾಜಿ ದೊಡ್ಡಮನೆ, ಉಪಾಧ್ಯಕ್ಷ ಬಿಎಸ್ ಸುಲೈಮಾನ್, ಕಾರ್ಯದರ್ಶಿ ಹಾರೀಸ್ ಕೋಡಿಬೈಲ್, ಟ್ರಸ್ಟ್ ಕಾರ್ಯದರ್ಶಿ ಶೆರೀಫ್ ಕಟ್ಟದಬಳಿ, ಲೆಕ್ಕ ಪರಿಶೋದಕ ಕೆರೀಂ ಮಿಲನ್ ಮೊದಲಾದವರು ಝೂಮ್ ಮೂಲಕ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಟ್ರಸ್ಟ್ ನಾಯಕರನ್ನು ಜುಬೈಲ್ ಪ್ರೆಂಡ್ಸ್ ಸಮಿತಿ ಸದಸ್ಯರು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಆಶಿಕ್ ಮಿಲನ್ ಕಾರ್ಯಕ್ರಮ ನಿರೂಪಿಸಿದರು. ಪರ್ಹಾನ್ ಮಜಲ್ ಧನ್ಯವಾದವಿತ್ತರು.








 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News