ಎಸ್ ವೈ ಎಸ್ ದ.ಕ. ಜಿಲ್ಲಾ ಸಮಿತಿಯಿಂದ 1500 ಮಂದಿಗೆ ಆಹಾರ ಕಿಟ್ ವಿತರಣೆ
ಮಂಗಳೂರು, ಸೆ.2: ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ಸಾಂತ್ವನ-ಇಸಾಬ ವಿಭಾಗದ ವತಿಯಿಂದ 1,500ನೇ ಮೀಲಾದ್ ಆಚರಣೆಯ ಪ್ರಯುಕ್ತ ‘ಸಾರ್ವತ್ರಿಕ ದರ್ಶನದ ಪ್ರವಾದಿ’ ಘೋಷವಾಕ್ಯ ದೊಂದಿಗೆ 1500 ಮಂದಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಮಂಗಳೂರು ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ರವಿವಾರ ನಡೆಯಿತು.
ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಾಂತ್ವನ -ಇಸಾಬ ಜಿಲ್ಲಾ ಮುಖ್ಯಸ್ಥ ಹಾಫಿಳ್ ಯಾಕೂಬ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ , ರಾಜ್ಯ ಉಪಾಧ್ಯಕ್ಷ ಇಬ್ರಾಹೀಂ ಖಲೀಲ್ ಮಾಲಿಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಜಿಲ್ಲಾ ಉಪಾಧ್ಯಕ್ಷರುಗಳಾದ ನವಾಝ್ ಸಖಾಫಿ ಅಡ್ಯಾರ್ ಪದವು , ನಝೀರ್ ಹಾಜಿ ಲುಲು ಕಾರ್ಯದರ್ಶಿಗಳಾದ ಸಿ.ಎಂ.ಉಮರುಲ್ ಫಾರೂಕ್ , ಹಸನ್ ಪಾಂಡೇಶ್ವರ , ಮಾಜಿ ಜಿಲ್ಲಾಧ್ಯಕ್ಷ , ಇಸ್ಹಾಕ್ ಝುಹ್ರಿ ಕಾನಕೆರೆ ಯುಕೆ.ಕೆಸಿಎಫ್ ನಾಯಕ ಇಂಜಿನಿಯರ್ ಹನೀಫ್ ಪೇರಿಮಾರ್ ಮತ್ತು ಇಸಾಬ ತಂಡದ ಸದಸ್ಯರು ಉಪಸ್ಥಿತರಿದ್ದರು.