ಮಂಗಳೂರು ಮದರಸಾ ಅಸೋಸಿಯೇಷನ್ ವತಿಯಿಂದ ಶಿಕ್ಷಕರ ತರಬೇತಿ ಕಾರ್ಯಾಗಾರ
ಮಂಗಳೂರು : ಮಂಗಳೂರು ಮದರಸಾ ಅಸೋಸಿಯೇಷನ್ ವತಿಯಿಂದ ಹೈಲ್ಯಾಂಡ್ ನಲ್ಲಿರುವ HIF ಆಡಿಟೋರಿಯಂ ನಲ್ಲಿ ರವಿವಾರ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಡುಪಿಯ ಅಲ್ ಇಬಾದಾ ಇಂಟರ್ನ್ಯಾಷನಲ್ ಸ್ಕೂಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶೇಖ್ ಅಬ್ದುಲ್ ಲತೀಫ್ ಮದನಿ ಹಾಗೂ ಮಂಗಳೂರಿನ ಇಕ್ರಾ ಅರೇಬಿಕ್ ಸ್ಕೂಲ್ ಪ್ರಾಂಶುಪಾಲರಾದ ಮೌಲಾನಾ ಸಾಲಿಂ ನದ್ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಮದರಸಾ ಶಿಕ್ಷಕರ ಬೋಧನಾ ಕೌಶಲ್ಯ ಹಾಗೂ ಆಧುನಿಕ ಶೈಕ್ಷಣಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಅವಧಿಯಲ್ಲಿ ಬೋಧನಾ ವಿಧಾನಗಳಲ್ಲಿ ನವೀನತೆ, ವಿದ್ಯಾರ್ಥಿಗಳ ಮನೋವಿಜ್ಞಾನ ಮತ್ತು ಶೈಕ್ಷಣಿಕ ಪ್ರೇರಣೆ ಕುರಿತಂತೆ ವಿಶ್ಲೇಷಣಾತ್ಮಕ ಚರ್ಚೆಗಳು ನಡೆದವು.
ಕಾರ್ಯಾಗಾರವು ಬೆಳಿಗ್ಗೆ 9:45 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1:30 ರವರೆಗೆ ನಡೆಯಿತು. ಭಾಗವಹಿಸಿದ ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಶಿಕ್ಷಣ ಮತ್ತು ಮಾನವೀಯ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ HIF ಮಂಗಳೂರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನಿಸಲಾಯಿತು.
ಮದ್ರಸಾ ಅಸೋಸಿಯೇಷನ್ ಮಂಗಳೂರು ಅನೇಕ ಸಂಜೆ ಮದರಸಾಗಳ ಒಕ್ಕೂಟವಾಗಿದ್ದು, ಸಂಸ್ಥೆಯು ಕುರ್ ಆನ್ ಉಚ್ಛಾರಣೆಯಲ್ಲಿ ಶುದ್ಧತೆ, ನೈತಿಕ ಮೌಲ್ಯಗಳ ಬೋಧನೆ ಮತ್ತು ವಿದ್ಯಾರ್ಥಿಗಳ ಆಧ್ಯಾತ್ಮಿಕ ಬೆಳವಣಿಗೆಗೆ ಆದ್ಯತೆ ನೀಡುತ್ತದೆ.
ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮದರಸಾಗಳಲ್ಲಿ ಇಕ್ರಾ ಅರೇಬಿಕ್ ಸ್ಕೂಲ್, ದಕ್ಷಿಣ ಕರ್ನಾಟಕ ಸಲಫಿ ಮೂವ್ಮೆಂಟ್ (SEB), ಕರ್ನಾಟಕ ಸಲಫಿ ಅಸೋಸಿಯೇಷನ್ ಎಜುಕೇಶನ್ ಬೋರ್ಡ್, ಜಮಾಅತ್-ಎ-ಇಸ್ಲಾಮಿ ಎಜುಕೇಶನ್ ಬೋರ್ಡ್, ದೀನಿಯಾತ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್, ಅಹ್ಲೆ ಹದೀಸ್ ಎಜುಕೇಶನ್ ಬೋರ್ಡ್, ಅಸ್ಸುಫ್ಫಾ ಅಕಾಡೆಮಿ, ಅಲ್-ಫುರ್ಕಾನ್ ಅರೇಬಿಕ್ ಇನ್ಸ್ಟಿಟ್ಯೂಟ್ (ಪೆರ್ಮನ್ನೂರು) ಮತ್ತು ಅಲ್-ಖಲಾಮ್ ಅಕಾಡೆಮಿ (ಫಳ್ನೀರ್) ಸೇರಿದಂತೆ ಹಲವು ಸಂಸ್ಥೆಗಳು ಸೇರಿವೆ.