×
Ad

ಉಜಿರೆ: ಮನೆಗೆ ನುಗ್ಗಿ ನಗ, ನಗದು ಕಳವು; ಪ್ರಕರಣ ದಾಖಲು

Update: 2025-10-10 13:53 IST

ಬೆಳ್ತಂಗಡಿ: ಉಜಿರೆ ಅರಳಿ ಬಳಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಕಳ್ಳರು ಮನೆಗೆ ನುಗ್ಗಿ ನಗ -ನಗದು ದೋಚಿ ಪರಾರಿಯಾದ ಘಟನೆ ಅ.9ರಂದು ನಡೆದಿದೆ.

ಬೆಟ್ಟು ಮನೆಯ ಅರಳಿ ನಿವಾಸಿ ಮಹಾಬಲ ರವರು ಬೆಳಗ್ಗೆ ಎಂದಿನಂತೆ ಕೆಲಸ ಹೋಗಿದ್ದು, ಈ ವೇಳೆ ಮನೆಯಲ್ಲಿ ಯಾರು ಇರಲಿಲ್ಲ.  ಈ ವೇಳೆ ಕಳ್ಳರು ಮನೆಯ ಪಕ್ಕಾಸು ತೆಗೆದು ಮನೆಯ ಒಳನುಗ್ಗಿ ಕಪಾಟಿನಲ್ಲಿದ್ದ ರೂ. 10000 ನಗದು ಹಾಗೂ 50ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. 

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News