ಉಳ್ಳಾಲ : ಕೃಷಿ ಉತ್ಸವ, ದೇಸಿ ಆಹಾರ ಮೇಳ ಉದ್ಘಾಟನೆ
ಉಳ್ಳಾಲ : ರೈತಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಂಗಳೂರು, ಕೃಷಿ ಇಲಾಖೆ ಮಂಗಳೂರು, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಹಾಗೂ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ನಡೆಯುವ ಉಳ್ಳಾಲ ಕೃಷಿ ಉತ್ಸವ ಮತ್ತು ದೇಸಿ ಆಹಾರ ಮೇಳ ಕಾರ್ಯಕ್ರಮ ದ ಉದ್ಘಾಟನೆ ಶನಿವಾರ ತೊಕ್ಕೊಟ್ಟು ಗಟ್ಟಿ ಸಮಾಜಭವನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು,ಕೃಷಿ ಮೇಳ ಬಹಳ ಉತ್ತಮವಾದ ಕಾರ್ಯಕ್ರಮ. ಕೃಷಿ ಭಾರತದ ಬೆನ್ನೆಲುಬು. ಇದಕ್ಕೆ ನಾವು ಪ್ರೋತ್ಸಾಹ ನೀಡಬೇಕು. ದುಬೈ ಗೆ 60 ಲಕ್ಷ ಟನ್ ಸ್ವದೇಶಿ ಸೆಗಣಿ ಭಾರತದಿಂದ ರಫ್ತಾಗಿದೆ. ನಾವು ಕೃಷಿಕರ ಬೆನ್ನು ತಟ್ಟಬೇಕು ಎಂದು ಹೇಳಿದರು
ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕೃಷಿ ಮೇಳದಲ್ಲಿ ಎಲ್ಲಾ ವಿಧದ ಖಾದ್ಯ ವಸ್ತುಗಳು ಪ್ರದರ್ಶನ ಆಗುತ್ತಿದೆ.ಇದು ಕೆಲವು ದಿನಗಳ ಕಾಲ ನಡೆಯಬೇಕು. ಜನರು ಇದರಲ್ಲಿ ಭಾಗವಹಿಸಿ ಖುಷಿ ಪಡಬೇಕು ಎಂದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಅವರ ಅಭಿವೃದ್ಧಿಗೆ ಪೂರಕವಾಗುವ ಇಂತಹ ಕಾರ್ಯಕ್ರಮ ಅಗತ್ಯ. ಅವರಿಗೆ ಪೂರ್ಣ ಸಹಕಾರ ನಾವು ನೀಡಬೇಕು. ಇಂತಹ ಕೃಷಿ ಮೇಳ ಯಶಸ್ಸು ಆಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ, ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ, ಚಂದ್ರ ಶೇಖರ್ ಗಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಕುವೆತ್ತಬೈಲ್ ಮತ್ತಿತರರು ಉಪಸ್ಥಿತರಿದ್ದರು.
ಭರತ್ ರಾಜ್ ಸೊರಕೆ ಸ್ವಾಗತಿಸಿದರು ಸುಮಲತ ಕೊಣಾಜೆ ವಂದಿಸಿದರು.