×
Ad

ಉಳ್ಳಾಲ: ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಸ್ಕೂಟರ್; ಚಾಲಕ ಮೃತ್ಯು

Update: 2025-08-07 23:06 IST

ಉಳ್ಳಾಲ: ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬಳಿಕ ಆವರಣಗೋಡೆಯೊಂದಕ್ಕೆ ಬಡಿದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸುಂದರಿ ಬಾಗ್ ಬಳಿ ನಡೆದಿದೆ

ಮೃತ ಸವಾರನನ್ನು ಮೂಲತ: ಉಳ್ಳಾಲ ಕೋಟೆಪುರ ನಿವಾಸಿ, ಪ್ರಸ್ತುತ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಇಬ್ರಾಹಿಂ (47) ಎಂದು ಗುರುತಿಸಲಾಗಿದೆ.

ಮಂಗಳೂರಿನ ಧಕ್ಕೆಯಲ್ಲಿ ಮೀನಿನ ವ್ಯವಹಾರ ನಡೆಸುತ್ತಿದ್ದ ಅವರು ಇಂದು ಸಂಜೆ ತನ್ನ ಕಿರಿಯ ಮಗನನ್ನು ಸ್ಕೂಟರಲ್ಲಿ ಕುಳ್ಳಿರಿಸಿ ಸುಂದರೀಭಾಗ್ ನಿಂದ ಮುಕ್ಕಚ್ಚೇರಿಯ ಮನೆಯ ಕಡೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬಳಿಕ ಆವರಣಗೋಡೆಯೊಂದಕ್ಕೆ ಬಡಿದಿದೆ . ಇದರಿಂದ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪುತ್ರನ ಕೈಗೆ ಏಟು ತಗುಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು ಇಬ್ರಾಹಿಂ ಅವರ ಮೃತದೇಹವನ್ನ‌ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News