×
Ad

ಉಳ್ಳಾಲ: ಡಿ.1 ರಂದು ಸೀರತ್ ಸಮಾವೇಶ

Update: 2023-11-30 15:44 IST

ಮಂಗಳೂರು: ಯುನಿವೆಫ್ ಕರ್ನಾಟಕ 2023 ರ ಅಕ್ಟೋಬರ್ 6 ರಿಂದ ಡಿಸೆಂಬರ್ 22 ವರೆಗೆ "ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಪ್ರಯುಕ್ತ ಡಿಸೆಂಬರ್ 1 ರ ಶುಕ್ರವಾರ ಸಂಜೆ 6.45 ಕ್ಕೆ ಉಳ್ಳಾಲ ನಗರಸಭೆ ಮೈದಾನದಲ್ಲಿ ಸೀರತ್ ಸಮಾವೇಶ ಜರಗಲಿರುವುದು.

ಈ ಕಾರ್ಯಕ್ರಮದಲ್ಲಿ ನಿಮ್ರಾ ಮಸೀದಿಯ ಖತೀಬ್ ಹಾಗೂ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ನಮ್ಮ ಕುಟುಂಬ ಜೀವನ ಮತ್ತು ಪ್ರವಾದಿ ಹ.ಮುಹಮ್ಮದ್ (ಸ)" ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ.

ಜನಾಬ್ ಯು. ಬಿ. ಮುಹಮ್ಮದ್, ಮಾಲಕರು, ಸುಲ್ತಾನ್ ಬಿಲ್ಡರ್ಸ್, ಮಂಗಳೂರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ದಕ್ಷಿಣ ವಲಯಾಧ್ಯಕ್ಷ ಅಡ್ವೋಕೇಟ್ ಸಿರಾಜುದ್ದೀನ್ ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಸಂಚಾಲಕ ಶಮೀರ್ ಉಚ್ಚಿಲ ವಿನಂತಿಸಿದ್ದಾರೆ.

ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News