×
Ad

ಉಳ್ಳಾಲ | ಕ್ರೀಡಾ ಸಂಗಮ 2025ರ ಕಾರ್ಯಕ್ರಮಕ್ಕೆ ಚಾಲನೆ

Update: 2025-11-11 12:11 IST

ಉಳ್ಳಾಲ: ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಗುಡ್ಡೆ ಇಲ್ಲಿನ ವಿದ್ಯಾರ್ಥಿಗಳ ಕ್ರೀಡಾ ಸಂಗಮ 2025ರ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ರಹೀಮ್ ಉಚ್ಚಿಲ ಅವರು, ಈ ಶಾಲೆಯಲ್ಲಿ ಕಲಿಯುವ ಐವರು ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದದ್ದು ಸಂತಸ ತಂದಿದೆ. ಪಾಠದೊಂದಿಗೆ ಆಟ ಬೇಕು. ಕಲಿಯಲು ಬೇಕಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಪಾಠದಲ್ಲಿ ಹಿಂದುಳಿಯಬಾರದು ಎಂದು ಕರೆ ನೀಡಿದರು.

ಸಲಾಮ್ ಉಚ್ಚಿಲ ಮಾತನಾಡಿ,  ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪತ್ರಕರ್ತ ಬಶೀರ್ ಕಲ್ಕಟ್ಟ ಮಾತನಾಡಿದರು. ಕೌನ್ಸಿಲರ್ ಇಸಾಕ್ ಅಜ್ಜಿನಡ್ಕ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕ್ರೀಡಾ ಪ್ರತಿನಿಧಿ ಝಝ್ಮಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷ ಬಶೀರ್, ಜಿ.ಐ. ಮುಹಮ್ಮದ್ ಅಲಿ, ಸಲಾಮ್ ಉಚ್ಚಿಲ, ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲ್, ಶಿಕ್ಷಕರಾದ ಚಂದ್ರ ಶೇಖರ್ ಸಿ.ಎಚ್., ಸಂಧ್ಯಾ ಕುಮಾರಿ, ಬಬಿತಾ, ಮಂಜುನಾಥ, ನಿರೀಕ್ಷಾ, ಅನುಷಾ, ಅಶ್ವಿನಿ, ಸವಿತಾ ಪ್ರಿಯಾ ವಿನುತಾ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಹರೀಶ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ್ ಎನ್. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News