×
Ad

ಉರುವಾಲು: ಕಬ್ಬಡ್ಡಿ ಪಂದ್ಯಾಟ; ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Update: 2025-08-19 18:43 IST

ಉರುವಾಲು: ಆ. 19ರಂದು ಕರಾಯ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಬಾಲಕರ ಕಬ್ಬಡ್ಡಿ ಪಂದ್ಯಾಟದಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ತಂಡ ಅಂತಿಮ ಸುತ್ತಿನಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಭಾಗವಹಿಸಿದ ವಿದ್ಯಾರ್ಥಿಗಳು ಯಜ್ಞಶ್ 8ನೇ ತರಗತಿ, ಮಹಮ್ಮದ್ ಶಮ್ಮಾಸ್ 7ನೇ ತರಗತಿ, ತ್ರಿತಿಕ್ 7ನೇ ತರಗತಿ, ಸಾತ್ವಿಕ್ 8ನೇ ತರಗತಿ, ಅಶ್ವಿನ್ ಎನ್. 7ನೇ ತರಗತಿ, ಕಾರ್ತಿಕ್ ಎಂಟನೇ ತರಗತಿ, ಸಾಕೆತ್ ಆಳ್ವ 8ನೇ ತರಗತಿ, ಗಗನ್ 6ನೇ ತರಗತಿ.

ಇವರಲ್ಲಿ ಯಜೇಶ್ ರಿಗೆ ಬೆಸ್ಟ್ ಆಲ್ ರೌಂಡರ್ ಹಾಗೂ ಕಾರ್ತಿಕ್ ರಿಗೆ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಒಲಿದುಬಂದಿದೆ. ಇವರಿಗೆ ವಿಂಧ್ಯಾ ಅವರು ತರಬೇತಿ ನೀಡಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಶಾಲಾ ಶಿಕ್ಷಕ ವೃಂದ ಹಾಗೂ ಸೇವಾ ಸಮಿತಿ ಶುಭ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News