×
Ad

ವಿನಾಯಕ ಬಾಳಿಗಾ ಹತ್ಯಾ ಪ್ರಕರಣ: ಮುಂದಿನ ವಿಚಾರಣೆ ಜನವರಿ 16ಕ್ಕೆ ಮುಂದೂಡಿಕೆ

Update: 2023-11-28 23:24 IST

ಮಂಗಳೂರು, ನ.28: ಏಳು ವರ್ಷಗಳ ಹಿಂದೆ ನಗರದಲ್ಲಿ ನಡೆದ ಮಾಹಿತಿ ಹಕ್ಕು ಹಾಗೂ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2024ರ ಜನವರಿ 16ಕ್ಕೆ ಮುಂದೂಡಿದೆ.

ಮುಂದಿನ ವರ್ಷದ ಜ.16, 17 ಮತ್ತು 18ರಂದು ವಿಚಾರಣೆ ನಡೆಯಲಿದೆ.

2016ರ ಮಾರ್ಚ್ 21ರಂದು ನಡೆದಿರುವ ವಿನಾಯಕ ಬಾಳಿಗಾರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮೊದಲ ದಿನ ವಿನಾಯಕ ಬಾಳಿಗಾರ ಮನೆಯ ಪಕ್ಕದ ನಿವಾಸಿ ಡಾ.ಸುಬ್ರಾಯ ಪೈ, ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗಾ ಮತ್ತು ಹರ್ಷಾ ವಿ ಬಾಳಿಗಾ ಅವರು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಎರಡನೇ ದಿನವೂ ವಿನಾಯಕ ಬಾಳಿಗಾರ ಸಹೋದರಿ ಅನುರಾಧ ಬಾಳಿಗಾ ಅವರಿಂದ ಮತ್ತಷ್ಟು ಮಾಹಿತಿಯನ್ನು ನ್ಯಾಯಾಲಯವು ಕಲೆ ಹಾಕಿದೆ.

ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಅವರು ಸರಕಾರಿ ವಿಶೇಷ ಅಭಿಯೋಜಕರಾಗಿದ್ದಾರೆ.

ವಿನಾಯಕ ಬಾಳಿಗಾ ಹತ್ಯಾ ಪ್ರಕರಣದ ವಿಚಾರಣೆ ಈ ವರ್ಷ ಎರಡನೇ ಬಾರಿ ನಡೆದಿದೆ. ಕಳೆದ ಜನವರಿ 3 ಮತ್ತು 4ರಂದು ಮೊದಲ ಬಾರಿ ಸಾಕ್ಷಿದಾರರ ವಿಚಾರಣೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News