×
Ad

ವಿಟ್ಲ: ಆಯತಪ್ಪಿ ನದಿಗೆ ಬಿದ್ದ ವೃದ್ಧ; ಸ್ಥಳೀಯ ಯುವಕರಿಂದ ರಕ್ಷಣೆ

Update: 2024-10-07 12:03 IST

ವಿಟ್ಲ: ಉಕ್ಕಿ ಹರಿಯುತ್ತಿದ್ದ ನದಿಗೆ ಆಯತಪ್ಪಿ ಬಿದ್ದ ವೃದ್ಧ ವ್ಯಕ್ತಿಯನ್ನು ಯುವಕರಿಬ್ಬರು ರಕ್ಷಿಸಿರುವ ಘಟನೆ ರವಿವಾರ ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ನಡೆದಿದೆ.

ಉಮ್ಮರ್  (70) ರಕ್ಷಿಸಲ್ಪಟ್ಟ ವ್ಯಕ್ತಿ.  ವಿಟ್ಲ ಭಾಗದಲ್ಲಿ ರವಿವಾರ ವ್ಯಾಪಕ ಮಳೆಯಾಗಿದ್ದು, ಮಧ್ಯಾಹ್ನ ಶುರುವಾದ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿತ್ತು. ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ದಾರಿಯಾಗಿ ಸಂಜೆ ವೇಳೆ ಉಮರ್ ಅವರು  ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಸೇತುವೆಗೆ ಯಾವುದೇ ರೀತಿಯ ತಡೆ ಇಲ್ಲದೆ ಇರುವುದು ಇದಕ್ಕೆ‌ ಕಾರಣವೆನ್ನಲಾಗಿದೆ.

ಕೂಡಲೇ ಅಲ್ಲೇ‌ ಇದ್ದ ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್‌ ಹಾಗೂ ಸುರೇಶ್ ಅವರು ಪ್ರವಾಹವನ್ನೂ ಲೆಕ್ಕಿಸದೆ ನದಿಗೆ ಹಾರಿ ಈಜಾಡಿಕೊಂಡು ಹೋಗಿ ಉಮರ್‌ ಅವರನ್ನು ಅಪಾಯದಿಂದ ರಕ್ಷಿಸಿದ್ದಾರೆ. ಕೂಡಲೇ  ಸ್ಥಳೀಯರು ಯುವಕರಿಗೆ ಸಾಥ್  ನೀಡಿದ್ದು,  ಯುವಕರ ಸಮಯಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News