×
Ad

ನ.23-24 ರಂದು ಕಣಚೂರು ಮಕ್ಕಳ ವಿಭಾಗದಿಂದ ರಾಜ್ಯಮಟ್ಟದ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ

Update: 2024-11-22 12:13 IST

ಉಳ್ಳಾಲ: ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಕ್ಕಳ ವಿಭಾಗ ದ ಆಶ್ರಯದಲ್ಲಿ ಹಾರ್ಮೋನೈಸಿಂಗ್‌ ಹಾರ್ಮೋನ್ಸ್‌ ಪೀಡಿಯಾಟ್ರಿಕ್‌ ಎಂಡೋಕ್ರೈನಾಲಜಿ ಅಪ್ಡೇಟ್‌ -2024 ಮಂಗಳೂರು ರಾಜ್ಯಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣಾ ಕಾರ್ಯಗಾರ ನ.23 ಮತ್ತು ನ.24 ರಂದು ನಾಟೆಕಲ್‌ ಕಣಚೂರು ಆಸ್ಪತ್ರೆ ಸಭಾಂಗಣದಲ್ಲಿ ಜರಗಲಿದೆ ಎಂದು ಸಂಘಟನಾ ಕಾರ್ಯದರ್ಶಿ ಕಿಮ್ಸ್‌ ಮಕ್ಕಳ ತಜ್ಞ ಡಾ. ವರ್ಷಾ ಹೇಳಿದರು.

ತೊಕ್ಕೊಟ್ಟು ಸೇವಾಸೌಧದ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ.23-24 ರಂದು ಕಣಚೂರು ಮಕ್ಕಳ ವಿಭಾಗದಿಂದ ರಾಜ್ಯಮಟ್ಟದ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ ಟೈಪ್‌ -1 ಡೈಯಾಬಿಟೀಸ್‌ ಮೆಲ್ಲಿಟಸ್‌ (ಮಧುಮೇಹ ರೋಗ) ಮತ್ತು ಬೆಳವಣಿಗೆಯ ಮೇಲ್ವಿಚಾರಣೆಯ ಮೇಲೆ ಕಾರ್ಯಗಾರವನ್ನು ಆಯೋಜಿಸಲಾಗಿದೆ. ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಅಂಕಗಳನ್ನು ನೀಡಲಾಗಿದೆ. ಇನ್ಸುಲಿನ್‌ ಡೆಲಿವರಿ ಡಿವೈಸಸ್‌, ಶುಗರ್‌ ರೆಕಾರ್ಡಿಂಗ್‌ , ಮಕ್ಕಳಲ್ಲಿ ಬೆಳವಣಿಗೆಯ ಮಾನಿಟರಿಂಗ್‌ ಸೇರಿದಂತೆ ಸಮಾಜದಲ್ಲಿ ಬೊಜ್ಜು, ಡಯಾಬಿಟೀಸ್‌ ಹೆಚ್ಚು ಆಗುತ್ತಿರುವ ಕಾರಣಗಳ ಕುರಿತು ವಿಶ್ಲೇಷಣೆಗಳ ಪ್ರಾಕ್ಟಿಕಲ್‌ ಹಾಗೂ ವಿಶ್ಲೇಷಣೆಗಳನ್ನು ಕಾರ್ಯಗಾರ ಒಳಗೊಂಡಿದೆ. ಡಾ.ಓನಿಯಲ್‌ ಫೆರ್ನಾಂಡಿಸ್‌ ಅವರ ಮಾರ್ಗದರ್ಶನದಲ್ಲಿ ಮಕ್ಕಳ ವಿಭಾಗ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ ಆಯೋಜಿಸಿದ್ದು, ರಾಜ್ಯದಾದ್ಯಂತ 150 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಯು.ಕೆ.,ಮೋನು ಕಾರ್ಯಗಾರವನ್ನು ಉದ್ಘಾಟಿಸಲಿದ್ದಾರೆ.ಕೆಐಎಂಎಸ್‌ ನಿರ್ದೇಶಕ ಅಬ್ದುಲ್‌ ರಹಿಮಾನ್‌, ಡೀನ್‌ ಡಾ ಶಾನವಾಝ್ ಮಾಣಿಪ್ಪಾಡಿ, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್‌ ಶೆಟ್ಟಿ, ಆರೋಗ್ಯ ವಿಜ್ಞಾನ ಪರಿಷತ್‌ ನ ಅಧ್ಯಕ್ಷರು ಮತ್ತು ಸದಸ್ಯ ಡಾ. ಇಸ್ಮಾಯಿಲ್‌ ಹೆಜಮಾಡಿ ಮತ್ತು ಡಾ.ಎಂ.ವ0ಇ.ಪ್ರಭು ಮತ್ತು ಡಾ.ರೋಹನ್‌ ಎಸ್.ಮೋನಿಸ್‌ , ಕೆಐಎಂಎಸ್ ಮಕ್ಕಳ ವಿಭಾಗದ ಪ್ರೊ. ಎಮಿರಿಟರ್ಸ್ ಡಾ.ಶಂಶಾದ್ ಎ ಖಾನ್ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡಾ.ಓನಿಯಲ್‌ ಫೆರ್ನಾಂಡಿಸ್‌, ಡಾ.ಧೀಕ್ಷಾ ಶಿರೋಡ್‌ ಕರ್‌, ಡಾ.ನೂರುಲ್ಲಾ ಎ.ಎಮ್‌, ಡಾ.ಸೈಫುದ್ದೀನ್‌ ಎ.ಎ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News