ಯುವಕನಿಗೆ ಕೊಲೆ ಬೆದರಿಕೆ ಆರೋಪ: ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲು
Update: 2026-01-17 19:24 IST
ಮಂಗಳೂರು, ಜ.17: ಯುವಕನಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ದಂತೆ ಕಾವೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪರಿಶಿಷ್ಟ ಜಾತಿಯ ಉಪಜಾತಿಯಾದ ಮುಂಡಾಲ ಸಮುದಾಯಕ್ಕೆ ಸೇರಿದ ಮುಲ್ಕಿಯ ಅರುಣ್ ಕುಮಾರ್ ಎಂಬವ ರಿಗೆ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಸುರತ್ಕಲ್ ತಡಂಬೈಲ್ ನಿವಾಸಿ ನವೀನ್ ಎಂಬಾತ ಮೊಬೈಲ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಅರುಣ್ ಕುಮಾರ್ ಖಾಸಗಿ ಕಂಪೆನಿಯಲ್ಲಿ ಸೆಕ್ಯುರಿಟಿ ಸುಪರ್‌ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಜ.12ರಂದು ಸಂಜೆ ಅದೇ ಕಂಪೆನಿಯ ಮತ್ತೋರ್ವ ಉದ್ಯೋಗಿ ನವೀನ್ ಎಂಬಾತ ಫೋನ್ ಮಾಡಿ ಕೆಲಸಕ್ಕೆ ಜನ ಇಲ್ಲ. ಬೇಗ ಕರೆದುಕೊಂಡು ಬಾ ಎನ್ನುತ್ತಾ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಅರುಣ್ ಕುಮಾರ್ 3ನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಆದೇಶದಂತೆ ಜ.16ರಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.