×
Ad

ಯುವಕ ನಾಪತ್ತೆ: ದೂರು

Update: 2023-09-16 23:11 IST

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಸರೋಳಿಕೆರೆಯ ಯುವಕನೋರ್ವ ನಾಪತ್ತೆಯಾದ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿವದಾಸ್ ಎಂಬವರ ಪುತ್ರ ಸುಜೀತ್ ಕುಮಾರ್ (21) ಎಂಬವರೇ ನಾಪತ್ತೆಯಾದ ಯುವಕ. ಇವರು ಸೆ.15ರಂದು ರಾತ್ರಿ 9ರಿಂದ ಸೆ.16ರಂದು ನಸುಕಿನ ಜಾವ 3.30ರ ಅವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ.

ಹಿಂದಿ, ಕನ್ನಡ, ಮಲಯಾಳಂ ಹಾಗೂ ತುಳು ಮಾತನಾಡುತ್ತಾರೆ ಎಂದು ಈತನ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News