×
Ad

ಆರೆಸ್ಸೆಸ್‌ನ್ನು ಹೊಗಳಿದ ವಿವಾದ: ದಿಗ್ವಿಜಯ ಸಿಂಗ್‌ಗೆ ತಿರುಗೇಟು ನೀಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ!

Update: 2025-12-29 15:31 IST

ರೇವಂತ್ ರೆಡ್ಡಿ (Photo: PTI)

ಹೊಸದಿಲ್ಲಿ: ಸಂಘಟನಾ ಸಾಮರ್ಥ್ಯಕ್ಕಾಗಿ ಮತ್ತು ತಳಮಟ್ಟದ ಕಾರ್ಯಕರ್ತರು ಉನ್ನತ ಹುದ್ದೆಗೇರಲು ಅವಕಾಶ ನೀಡುತ್ತಿರುವುದಕ್ಕಾಗಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಪ್ರಶಂಸಿಸಿ ಪಕ್ಷದೊಳಗೆ ವಿವಾದವನ್ನು ಹುಟ್ಟುಹಾಕಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್‌ಗೆ ಸೋಮವಾರ ಎಕ್ಸ್ ಪೋಸ್ಟ್‌ನಲ್ಲಿ ತಿರುಗೇಟು ನೀಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು,‌ ಸೋನಿಯಾ ಗಾಂಧಿಯವರ ನಾಯಕತ್ವದಡಿ ರಾಜಕೀಯ ಮುಖ್ಯವಾಹಿನಿಯ ಹೊರಗಿನ ಇಬ್ಬರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದನ್ನು ನೆನಪಿಸಿದ್ದಾರೆ.

ಸೋನಿಯಾ ಗಾಂಧಿಯವರ ನಾಯಕತ್ವದಡಿ ತೆಲಂಗಾಣದ ಕುಗ್ರಾಮದಿಂದ ತನ್ನ ಸಾರ್ವಜನಿಕ ವೃತ್ತಿಜೀವನವನ್ನು ಆರಂಭಿಸಿದ್ದ ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿ ಹುದ್ದೆಗೆ ಏರಲು ಸಾಧ್ಯವಾಗಿತ್ತು. ಸೋನಿಯಾ‌ ಅವರು ಡಾ.ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರನ್ನೂ ಪ್ರಧಾನಿಯಾಗಿ ಮಾಡಿದ್ದರು ಎಂದು ರೆಡ್ಡಿ ಬರೆದಿದ್ದಾರೆ.

ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರ ಟ್ವೀಟ್ ಕಾಂಗ್ರೆಸ್‌ನೊಳಗಿನ ಬಿರುಕನ್ನು ಬಹಿರಂಗಗೊಳಿಸಿದೆ ಎಂದು ಕೆಲವರು ಭಾವಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News