×
Ad

ಎಲ್ಲಾ ವರ್ಗಗಳಿಗೂ ಪ್ರಯೋಜನಕಾರಿಯಾದ ಬಜೆಟ್: ಪ್ರಧಾನಿ ಮೋದಿ

Update: 2024-07-23 16:41 IST

ನರೇಂದ್ರ ಮೋದಿ | PC ; PTI 


ಹೊಸದಿಲ್ಲಿ: ಕೇಂದ್ರ ಬಜೆಟ್‌ ಎಲ್ಲ ವರ್ಗಗಳ ಜನರಿಗೂ ಪ್ರಯೋಜನಕಾರಿಯಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ ನಿರ್ಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

“ಈ ಬಜೆಟ್‌ ಸಮಾಜದ ಎಲ್ಲಾ ವರ್ಗಗಳನ್ನೂ ಸಬಲೀಕರಿಸುತ್ತದೆ. ಅದು ಹಳ್ಳಿಗಳು, ಬಡವರು ಮತ್ತು ರೈತರಿಗೆ ಪ್ರಯೋಜನಕಾರಿ. ಶಿಕ್ಷಣ, ಕೌಶಲ್ಯಕ್ಕೆ ಒತ್ತು ಹಾಗೂ ಯುವಜನರಿಗೆ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡಲಿದೆ. ಈ ಬಜೆಟ್‌ ಮಧ್ಯಮ ವರ್ಗಕ್ಕೆ ಹೊಸ ಶಕ್ತಿ ನೀಡಲಿದೆ,” ಎಂದು ಪ್ರಧಾನಿ ಹೇಳಿದರು.

“ಈ ಬಜೆಟ್‌ ಮಹಿಳಾ ಕೇಂದ್ರಿತವಾಗಿದೆ ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಮಂಡಿಸಲಾಗಿದೆ, ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲಿದೆ. ದೇಶವು ಮುಂದಿನ ಕೆಲ ವರ್ಷಗಳಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಈ ಬಜೆಟ್‌ ಸಹಕಾರಿಯಾಗಲಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

ಹೊಸ ತೆರಿಗೆ ನಿಯಮದಡಿಯಲ್ಲಿ ನಿಯಮಗಳ ನವೀಕರಣದೊಂದಿಗೆ ತೆರಿಗೆ ಹೊರೆಯನ್ನು ಕಡಿಮೆಗೊಳಿಸುವಲ್ಲಿ ಬಜೆಟ್‌ ಹೆಚ್ಚಿನ ಗಮನ ನೀಡಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ರೂ 1000 ಕೋಟಿ, ಏಂಜೆಲ್‌ ತೆರಿಗೆ ರದ್ದು, ಹೊಸ ಸ್ಯಾಟಿಲೈಟ್‌ ಟೌನ್‌ಗಳ ರಚನೆ ಮುಂತಾದವುಗಳನ್ನು ಒಳಗೊಂಡಿದೆ ದೇಶಾದ್ಯಂತ ಆರ್ಥಿಕ ಹಬ್‌ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ,” ಎಂದು ಪ್ರಧಾನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News